ಲೈಂಗಿಕ ಸಂಬಂಧ ಹೊಂದಿ ಮದುವೆಯಾಗದಿರುವುದು ಅತ್ಯಾಚಾರವಲ್ಲ; ಅಲಹಾಬಾದ್ ಹೈಕೋರ್ಟ್‌

Share
0Shares

March 19, 2026

ಲಖನೌ: ಲೈಂಗಿಕ ಸಂಬಂಧವನ್ನು ಹೊಂದಿದ ಬಳಿಕ, ಮದುವೆಯಾಗುವ ಭರವಸೆಯನ್ನು ಈಡೇರಿಸದೇ ಹೋದಲ್ಲಿ ಅದನ್ನು ಅತ್ಯಾಚಾರ ಎಂದು ಪರಿಗಣಿಸಲಾಗುವುದಿಲ್ಲ ಎಂದು, ಪ್ರಕರಣವೊಂದರಲ್ಲಿ ಅಲಹಾಬಾದ್‌ ಹೈಕೋರ್ಟ್‌ ತೀರ್ಪು ನೀಡಿದೆ.

ಅಜಯ್ ಸೈನಿ ಎಂಬಾತ ತನಗೆ ಮತ್ತು ಬರುವ ಪಾನೀಯವನ್ನು ನೀಡಿ, ಬಳಿಕ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಮದುವೆಯಾಗುವುದಾಗಿ ಭರವಸೆ ನೀಡಿ ಮೂರು ವರ್ಷ ಲೈಂಗಿಕ ಶೋಷಣೆ ಮುಂದುವರಿಸಿದ್ದಾನೆ ಎಂದು ಆರೋಪಿಸಿ ಮಹಿಳೆಯೊಬ್ಬರು ಪ್ರಕರಣ ದಾಖಲಿಸಿದ್ದಾರೆ. ಇದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಅಂಗೀಕರಿಸುವ ವೇಳೆ, ನ್ಯಾಯಮೂರ್ತಿ ಅವಿನಾಶ್‌ ಸಕ್ಸೇನಾ ಅವರ ಏಕಸದಸ್ಯ ಪೀಠವು ಈ ತೀರ್ಪು ನೀಡಿದೆ.

‘ಮದುವೆಯಾಗುವುದಾಗಿ ನಂಬಿಸಿ, ಲೈಂಗಿಕ ಸಂಪರ್ಕ ಬೆಳೆಸಿದ ನಂತರ ಓಡಿಹೋದ ಪ್ರಕರಣ ಇದಲ್ಲ. ಇವರ ಸಂಬಂಧವು ಮೂರು ವರ್ಷ ಮುಂದುವರಿದಿದೆ. ಇದು ದೀರ್ಘ ಅವಧಿಯೇ ಆಗಿದೆ. ಮದುವೆಯಾಗಿಲ್ಲ ಎಂಬ ಕಾರಣಕ್ಕೆ, ಇಬ್ಬರೂ ಭಾವನಾತ್ಮಕ ಸಂಬಂಧ ಹೊಂದಿದ್ದ ಸಮಯದಲ್ಲಿ ನಡೆದ ಲೈಂಗಿಕ ಸಂಬಂಧವು ಅತ್ಯಾಚಾರವಲ್ಲ’ ಎಂದಿದೆ.

‘ಅತ್ಯಾಚಾರ ಎಂಬುದು ಅತ್ಯಂತ ಗಂಭೀರ ಸ್ವರೂಪದ ಅಪರಾಧ. ಬಲವಂತವಾಗಿ ಲೈಂಗಿಕ ಹಿಂಸೆ ನೀಡುವ ಸಂದರ್ಭಗಳಲ್ಲಿ ಮಾತ್ರವೇ ಅದು ಅತ್ಯಾಚಾರ ಎಂದು ಆರೋಪಿಸಬಹುದು. ಸಂಬಂಧ ಹಾಳಾದ ಮಾತ್ರಕ್ಕೆ ಅತ್ಯಾಚಾರದ ಆರೋಪ ಹೊರಿಸುವುದು ಆ ಅಪರಾಧದ ಗಂಭೀರತೆಯನ್ನು ಕಡಿಮೆ ಮಾಡುತ್ತದೆ. ಆರೋಪಿಗೆ ಇದರಿಂದ ಗಂಭೀರ ಕಳಂಕ ತರುತ್ತದೆ. ಈ ವಿಷಯದಲ್ಲಿ ಕ್ರಿಮಿನಲ್‌ ಕಾನೂನಿನ ಬಳಕೆಯು ಖಂಡನೆಗೆ ಅರ್ಹವಾಗಿದೆ’ ಎಂದಿದೆ.

Share
0Shares

Leave a Reply

Your email address will not be published. Required fields are marked *

error: Content is protected !!
× How can I help you?
ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 94488 74282