ಮಧ್ಯಪ್ರದೇಶ | ಮನೆಯಲ್ಲಿ ಭಾರೀ ಬೆಂಕಿ ಅವಘಡ: 7 ಮಂದಿ ಸಾವು, ಮೂವರ ರಕ್ಷಣೆ

Share
0Shares

March 19, 2026

ಇಂದೋರ್: ಮಧ್ಯಪ್ರದೇಶದ ಇಂದೋರ್‌ನಲ್ಲಿ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ 7 ಮಂದಿ ಸಾವನ್ನಪ್ಪಿದ ಭೀಕರ ಅವಘಡ ಬುಧವಾರ ಬೆಳಗಿನ ಜಾವ ಸಂಭವಿಸಿದೆ.

ಮೃತರು ಮನೋಜ್ ಪುಗಲಿಯಾ(65),ವಿಜಯ್ ಸೇಥಿಯಾ(63), ಸುಮನ್(60),ಸಿಮ್ರಾನ್(30),ಚೋಟು ಸೇಥಿಯಾ(22), ಮತ್ತು 12 ವರ್ಷದ ಮಗು ಎಂದು ಗುರುತಿಸಲಾಗಿದೆ.

ಸ್ಥಳಕ್ಕಾಗಮಿಸಿದ ಇಂದೋರ್ ಪೊಲೀಸ್ ಆಯುಕ್ತ ಸಂತೋಷ್ ಸಿಂಗ್, ಪಾಲಿಮರ್ ಉದ್ಯಮಿ ಮನೋಜ್ ಪುಗಲಿಯಾ ಅವರ ಎರಡು ಅಂತಸ್ತಿನ ಮನೆಯಲ್ಲಿ 15 ಎಲ್‌ಪಿಜಿ ಸಿಲಿಂಡರ್‌ಗಳು ಮತ್ತು ರಾಸಾಯನಿಕಗಳು ಸಂಗ್ರಹವಾಗಿರುವುದು ಕಂಡುಬಂದಿದ್ದರಿಂದ ಬೆಂಕಿ ಬೇಗನೆ ಹರಡಿದೆ. ಬೆಂಕಿಯು ಮನೆಯ ಹೊರಗೆ ಚಾರ್ಜ್ ಆಗುತ್ತಿದ್ದ ಎಲೆಕ್ಟ್ರಿಕ್ ಕಾರಿನಿಂದ ಕಾಣಿಸಿಕೊಂಡಿಬಹುದು ಎಂದು ಹೇಳಿದ್ದಾರೆ.

“ಕನಿಷ್ಠ ನಾಲ್ಕು ಸಿಲಿಂಡರ್‌ಗಳು ಬೆಂಕಿಯಲ್ಲಿ ಸ್ಫೋಟಗೊಂಡಿವೆ. ಬೆಂಕಿ ಮನೆಯನ್ನು ಆವರಿಸಿದಾಗ ಕುಟುಂಬವು ನಿದ್ರಿಸಿದ್ದು, ಬಾಗಿಲುಗಳು ಲಾಕ್ ಆಗಿದ್ದರಿಂದ ಅವರು ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ” ಎಂದು ಸಿಂಗ್ ಹೇಳಿದರು.

ವಿಧಿವಿಜ್ಞಾನ ಪರೀಕ್ಷೆಯ ನಂತರ ಬೆಂಕಿಗೆ ನಿಖರವಾದ ಕಾರಣ ತಿಳಿದುಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕನಿಷ್ಠ ಆರು ಅಗ್ನಿಶಾಮಕ ದಳದ ವಾಹನಗಳನ್ನು ಸ್ಥಳಕ್ಕೆ ಬಂದು ಎರಡು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಗಿದೆ.

Share
0Shares

Leave a Reply

Your email address will not be published. Required fields are marked *

error: Content is protected !!
× How can I help you?
ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 94488 74282