
March 19, 2026
ನವದೆಹಲಿ: ಭಾರತದಲ್ಲಿರುವ 20ರಿಂದ 29 ವಯಸ್ಸಿನ 6.30 ಕೋಟಿ ಪದವೀಧರರಲ್ಲಿ 1.10 ಕೋಟಿ ಪದವೀಧರರು ನಿರುದ್ಯೋಗಿಗಳಾಗಿದ್ದಾರೆ ಎಂದು ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ವರದಿಯೊಂದು ತಿಳಿಸಿದೆ.
‘ಕೇವಲ 7 ಶೇಕಡಾ ಜನರು ಪದವಿ ಪಡೆದ ಒಂದು ವರ್ಷದ ಒಳಗೆ ಒಳ್ಳೆ ವೇತನವಿರುವ ಸ್ಥಿರ ಉದ್ಯೋಗವನ್ನು ಪಡೆಯುತ್ತಿದ್ದಾರೆ ಎಂದು ‘ದ ಸ್ಟೇಟ್ ಆಫ್ ವರ್ಕಿಂಗ್ ಇಂಡಿಯಾ’ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಪದವೀಧರರ ನಿರುದ್ಯೋಗ ಪ್ರಮಾಣವು ಅಧಿಕವಾಗಿದೆ. 15ರಿಂದ 25 ವಯಸ್ಸಿನ ಶೇ 40ರಷ್ಟು ಪದವೀಧರರು ಮತ್ತು 25 ರಿಂದ 29 ವಯಸ್ಸಿನ ಶೇ 20ರಷ್ಟು ಪದವೀಧರರು ನಿರುದ್ಯೋಗಿಗಳಾಗಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಪದವೀಧರರ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ಪದವೀಧರರ ನಿರುದ್ಯೋಗ ಪ್ರಮಾಣ ಹೆಚ್ಚಾಗುತ್ತಿದೆ’ ಎಂದು ವರದಿ ತಿಳಿಸಿದೆ
Share