ತುಮಕೂರು: “ಉಪವಾಸವು ಮನುಷ್ಯನಲ್ಲಿ ಮಾನವೀಯತೆಯ ಗುಣವನ್ನು ಬೆಳೆಸುವುದರ ಜೊತೆಗೆ ವ್ಯಕ್ತಿಯನ್ನು ಧರ್ಮನಿಷ್ಠನನ್ನಾಗಿಸುತ್ತದೆ” ಎಂದು ಜ.ಇ.ಹಿಂದ್ ಕರ್ನಾಟಕ, ರಾಜ್ಯ ಸಹ ಕಾರ್ಯದರ್ಶಿ ರಿಯಾಝ್ ಅಹ್ಮದ್ ರೋಣ ಹೇಳಿದರು. ಅವರು ಜಮಾಅತೆ ಇಸ್ಲಾಮೀ ಹಿಂದ್ ತುಮಕೂರು ವತಿಯಿಂದ ಸ್ಥಳೀಯ ಸುಧಾ ಟೀಹೌಸ್ ಸಭಾಂಗಣದಲ್ಲಿ ಹಮ್ಮಿಕೊಂಡ ಸೌಹಾರ್ದ ಇಫ್ತಾರ್ ಕೂಟ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಿ ಮಾತನಾಡಿದರು. ಈ ಸಮಾರಂಭದಲ್ಲಿ ಅತಿಥಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸುತ್ತಾ ಇಂತಹ ಸೌಹಾರ್ದ ಸಭೆಗಳು ರಾಜ್ಯಾದ್ಯಂತ ನಡೆದರೆ ಇಲ್ಲಿ ಕೋಮು ವೈಷಮ್ಯಗಳಿಗೆ ಆಸ್ಪದವೇ ಇರುವುದಿಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜ.ಇ.ಹಿಂದ್ ತುಮಕೂರು ಸ್ಥಾನೀಯ ಅಧ್ಯಕ್ಷ ಮೌಲಾನಾ ಅಸ್ರಾರ್ ಉಮ್ರಿ, ಸಾಮಾಜಿಕ ಕಾರ್ಯಕರ್ತ ಸುಬ್ರಮಣ್ಯ, ಎಸ್ಐಓ ಸ್ಥಾನಿ ಅಧ್ಯಕ್ಷ ಖಲೀಲ್ ಅಹ್ಮದ್ ಮುಂತಾದರೂ ಉಪಸ್ಥಿತರಿದ್ದರು. ಸಯ್ಯದ್ ಪೀರ್ ಪಾಷಾ ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ ಧನ್ಯವಾದ ಅರ್ಪಿಸಿದರು.
Share