
March 19, 2026
ಅಹಮದಾಬಾದ್: ‘ಪಶ್ಚಿಮ ಏಷ್ಯಾದಲ್ಲಿ ಏರ್ಪಟ್ಟಿರುವ ಸಂಘರ್ಷದಿಂದಾಗಿ ಅಹಮದಾಬಾದ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ (ಐಐಎಂಎ) ದುಬೈ ಕ್ಯಾಂಪಸ್‌ನ ಎಲ್ಲ 35 ವಿದ್ಯಾರ್ಥಿಗಳನ್ನು ಇಲ್ಲಿನ ಮುಖ್ಯ ಕ್ಯಾಂಪಸ್‌ಗೆ ಸ್ಥಳಾಂತರಿಸಲಾಗಿದೆ’ ಎಂದು ಐಐಎಂಎ ತಿಳಿಸಿದೆ.
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಆರಂಭವಾದ ಒಂದು ವರ್ಷದ ಎಂಬಿಎ ಕೋರ್ಸ್‌ನಲ್ಲಿ ವ್ಯಾಸಂಗ ಮಾಡುತ್ತಿರುವ ಈ ವಿದ್ಯಾರ್ಥಿಗಳು,ಯುದ್ಧ ಪ್ರಾರಂಭವಾದಾಗ ಸ್ಪೇನ್‌ನಲ್ಲಿ ಇಂಟರ್ನ್‌ಶಿಪ್ ಮಾಡುತ್ತಿದ್ದರು.
‘ದುಬೈನಲ್ಲಿ ಪರಿಸ್ಥಿತಿ ಸುಧಾರಿಸುವವರೆಗೆ ಅಹಮದಾಬಾದ್‌ನ ಐಐಎಂಎ ಕ್ಯಾಂಪಸ್‌ನಲ್ಲಿ ಈ ವಿದ್ಯಾರ್ಥಿಗಳು ವೈಯಕ್ತಿಕ ತರಗತಿಗಳ ಮೂಲಕ ತಮ್ಮ ಕೋರ್ಸ್ ಮುಂದುವರಿಸುತ್ತಾರೆ’ ಎಂದು ಮೂಲಗಳು ತಿಳಿಸಿವೆ.
Share