ಚೆನ್ನೈ: ಸಮಾಜದ ಅಂಚಿನಲ್ಲಿರುವ ಜನರಿಗೆ ಆಸರೆಯಾಗುವ ನಿಟ್ಟಿನಲ್ಲಿ ತಮಿಳುನಾಡು ಸರ್ಕಾರ ಮಂಗಳವಾರ ಮಹತ್ವದ ಘೋಷಣೆ ಮಾಡಿದೆ.
ರಾಜ್ಯದ ಸುಮಾರು 37 ಲಕ್ಷಕ್ಕೂ ಅಧಿಕ ಫಲಾನುಭವಿಗಳ ಬ್ಯಾಂಕ್ ಖಾತೆಗೆ ತಲಾ 2,000 ರೂಪಾಯಿ ವಿಶೇಷ ನಿಧಿಯನ್ನು ನೇರವಾಗಿ ಜಮೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ತಿಳಿಸಿದ್ದಾರೆ.
ಹಿರಿಯ ನಾಗರಿಕರು, ವಿಧವೆಯರು, ವಯಸ್ಸಾದ ತೃತೀಯಲಿಂಗಿಗಳು ಮತ್ತು ವಿಕಲಚೇತನರ ಆರ್ಥಿಕ ಸಂಕಷ್ಟವನ್ನು ನೀಗಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಪ್ರಸ್ತುತ ನೀಡಲಾಗುತ್ತಿರುವ ಮಾಸಿಕ ಪಿಂಚಣಿಯ ಜೊತೆಗೆ ಈ ಹೆಚ್ಚುವರಿ ಮೊತ್ತವನ್ನು ನೀಡಲಾಗುತ್ತಿದೆ.
ಕಳೆದ ಫೆಬ್ರವರಿಯಲ್ಲಿ ‘ಕಲೈಂಜರ್ ಮಗಳೀರ್ ಉರಿಮೈ ತೋಗೈ’ ಯೋಜನೆಯಡಿ ಮಹಿಳೆಯರಿಗೆ 2,000 ರೂ.ಗಳ ವಿಶೇಷ ಬೇಸಿಗೆ ಪ್ಯಾಕೇಜ್ ನೀಡಲಾಗಿತ್ತು. ಇದರ ಬೆನ್ನಲ್ಲೇ ಇತರ ದುರ್ಬಲ ವರ್ಗದವರಿಂದಲೂ ಇಂತಹದ್ದೇ ಬೇಡಿಕೆ ಕೇಳಿಬಂದಿತ್ತು. ಈ ಮನವಿಗಳಿಗೆ ಸ್ಪಂದಿಸಿರುವ ಸಿಎಂ ಸ್ಟಾಲಿನ್, ಇದೀಗ ಇತರ ವರ್ಗದವರಿಗೂ ಆರ್ಥಿಕ ನೆರವು ಘೋಷಿಸಿದ್ದಾರೆ.
Share