ವಿಜಯ್ ದಳಪತಿ ಬಾಳಲ್ಲಿ ಬಿರುಗಾಳಿ: ವಿಚ್ಛೇದನಕ್ಕೆ ಪತ್ನಿ ಸಂಗೀತಾ ಅರ್ಜಿ

Share
0Shares

ಚೆನ್ನೈ: ನಟ ವಿಜಯ್ ದಳಪತಿಗೆ ಮತ್ತೊಂದು ಶಾಕ್ ಎದುರಾಗಿದೆ. ಒಂದೆಡೆ ಜನನಾಯಗನ್ ಸಿನಿಮಾಕ್ಕೆ ಶಾಕ್ ಎದುರಾಗಿತ್ತು. ಆದರೆ ಇದರ ಬೆನ್ನಲ್ಲೇ ವಿಜಯ್‌ಗೆ ಪತ್ನಿ ಸಂಗೀತಾ ಶಾಕ್ ಕೊಟ್ಟಿದ್ದಾರೆ.

ತಮಿಳು ವೆಟ್ರಿ ಕಲಗಮ್ ಮುಖ್ಯಸ್ಥರೂ ಆಗಿರುವ ವಿಜಯ್ ಅವರ ಪತ್ನಿ ಸಂಗೀತಾ ವಿಚ್ಛೇದನ ಕೋರಿ ಕೋರ್ಟ್ ಮೆಟ್ಟಿಲೇರಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈಗಾಗಲೇ ಸಂಗೀತಾ ಚೆಂಗಲ್ಪಟ್ಟು ನ್ಯಾಯಾಲಯದ ಮೆಟ್ಟಿಲೇರಿದ್ದು, ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಸಂಗೀತಾ ಲಂಡನ್ ಮೂಲದ ತಮಿಳು ಮಹಿಳೆ. ಮೂಲತಃ ಶ್ರೀಲಂಕಾದವರಾದ, ಲಂಡನ್‌ನಲ್ಲಿ ನೆಲೆಸಿದ್ದರು. ಅವರು ವಿಜಯ್ ಅವರ ಅಪಾರ ಅಭಿಮಾನಿಯಾಗಿದ್ದರು ಮತ್ತು ನಂತರ ಅವರ ಜೀವನ ಸಂಗಾತಿಯಾದರು.

ವಿಜಯ್, ಸಂಗೀತಾ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಮಗ ಸಂಜಯ್ ಕೆನಡಾದಲ್ಲಿ ಚಲನಚಿತ್ರ ಅಧ್ಯಯನವನ್ನು ಪೂರ್ಣಗೊಳಿಸಿದರು ಮತ್ತು ಪ್ರಸ್ತುತ ನಿರ್ದೇಶಕನಾಗಿ ಪದಾರ್ಪಣೆ ಮಾಡುತ್ತಿದ್ದಾರೆ. ಅದೇ ರೀತಿ, ಮಗಳು ದಿವ್ಯ ಅಮೆರಿಕದಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ.

Share
0Shares

Leave a Reply

Your email address will not be published. Required fields are marked *

WP2Social Auto Publish Powered By : XYZScripts.com
error: Content is protected !!
× How can I help you?
ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 94488 74282