ವಿಜಯಪುರ: ನೊಬೆಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಬರೆದ 10 ತಿಂಗಳ ಪುಟ್ಟ ಪೋರ!

Share
0Shares

ವಿಜಯಪುರ:‌ ಇಲ್ಲಿನ ಪುಟ್ಟ ಬಾಲಕನೊಬ್ಬ ಸೇರಿದ್ದು, ವಯಸ್ಸಿಗೂ ಮೀರಿದ ಅಸಾಧಾರಣ ಸಾಧನೆ ಮಾಡಿದ್ದಾನೆ.

ವಿಜಯಪುರ ನಗರದ ನಿವಾಸಿಗಳಾದ ಸಚಿನ್ ಪಟ್ಟಣಶೆಟ್ಟಿ ಹಾಗೂ ಸಿಂಚನಾ ದಂಪತಿಯ ಪುತ್ರ, ಕೇವಲ 10 ತಿಂಗಳ ಮಗು ರಿಯಾನ್ಸ್ ಪಟ್ಟಣಶೆಟ್ಟಿ ಅಂಬೆಗಾಲಿಡುವ ಪ್ರಾಯದಲ್ಲೇ ‘ನೊಬೆಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ ಗೌರವಕ್ಕೆ ಪಾತ್ರನಾಗಿದ್ದಾನೆ.

ಬಾಲಕ ರಿಯಾನ್ಸ್ ಕೇವಲ 10 ತಿಂಗಳ ವಯಸ್ಸಿದ್ದಾಗ ಬರೋಬ್ಬರಿ 21 ಮೆಟ್ಟಿಲುಗಳನ್ನು ಕೇವಲ 36 ಸೆಕೆಂಡುಗಳಲ್ಲಿ ಸರಾಗವಾಗಿ ಹತ್ತುವ ಮೂಲಕ ದಾಖಲೆ ಬರೆದಿದ್ದಾನೆ. ಇಷ್ಟು ಸಣ್ಣ ಪ್ರಾಯದಲ್ಲಿ ಮಗುವೊಂದು ಇಷ್ಟು ವೇಗವಾಗಿ ಮೆಟ್ಟಿಲು ಹತ್ತಿರುವುದು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.

ಬಾಲಕ ರಿಯಾನ್ಸ್ ಆರಂಭದಲ್ಲಿ ಮನೆಯೊಳಗಿನ ಮೆಟ್ಟಿಲುಗಳನ್ನು ಅತ್ಯಂತ ವೇಗವಾಗಿ ಹತ್ತಿ ಇಳಿಯುತ್ತಿದ್ದ. ಮಗನ ಈ ವಿಶಿಷ್ಟ ಚಟುವಟಿಕೆಯನ್ನು ಸೂಕ್ಷ್ಮವಾಗಿ ಗಮನಿಸಿದ ತಾಯಿ ಸಿಂಚನಾ, ಆತನಿಗೆ ಒಂದು ಅಡಿ ಎತ್ತರದ ಮೆಟ್ಟಿಲುಗಳನ್ನು ಹತ್ತುವುದಕ್ಕೆ ಪ್ರೇರೇಪಿಸಿದರು. ತಾಯಿಯ ಪ್ರೋತ್ಸಾಹದೊಂದಿಗೆ ರಿಯಾನ್ಸ್ ಒಂದು ಅಡಿ ಎತ್ತರದ ಮೆಟ್ಟಿಲುಗಳನ್ನು ಕೂಡ ಯಾವುದೇ ಅಡೆತಡೆಯಿಲ್ಲದೆ ಸುಲಭವಾಗಿ ಹತ್ತಿ ತೋರಿಸಿದ. ಮಗನ ಈ ವಿಶಿಷ್ಟ ಸಾಮರ್ಥ್ಯವನ್ನು ಜಗತ್ತಿಗೆ ಪರಿಚಯಿಸಬೇಕೆಂದು ನಿರ್ಧರಿಸಿದ ಪೋಷಕರು, ರಿಯಾನ್ಸ್ ಮೆಟ್ಟಿಲು ಹತ್ತುವ ದೃಶ್ಯಗಳನ್ನು ವಿಡಿಯೋ ರೆಕಾರ್ಡ್ ಮಾಡಿ, ಅಗತ್ಯ ದಾಖಲೆಗಳೊಂದಿಗೆ ‘ನೊಬೆಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ ಸಂಸ್ಥೆಯ ಅಧಿಕಾರಿಗಳಿಗೆ ಕಳುಹಿಸಿಕೊಟ್ಟಿದ್ದರು. ಎಲ್ಲಾ ದಾಖಲೆ ಹಾಗೂ ವಿಡಿಯೋಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ಅಧಿಕಾರಿಗಳು ಬಾಲಕನ ಸಾಧನೆಯನ್ನು ಜಾಗತಿಕ ದಾಖಲೆಯಾಗಿ ಮಾನ್ಯ ಮಾಡಿ ಅಧಿಕೃತ ಪ್ರಮಾಣಪತ್ರ ನೀಡಿದ್ದಾರೆ.

Share
0Shares

Leave a Reply

Your email address will not be published. Required fields are marked *

WP2Social Auto Publish Powered By : XYZScripts.com