ಕರೂರು (ತಮಿಳುನಾಡು): ಕರೂರು ಕಾಲ್ತುಳಿತ ಘಟನೆ ನನ್ನ ರಾಜಕೀಯ ಜೀವನದ ಅತ್ಯಂತ ಆಳವಾದ ಗಾಯವಾಗಿ ಉಳಿದಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಮತ್ತು ಟಿವಿಕೆ ಮುಖ್ಯಸ್ಥ ಜೋಸೆಫ್ ವಿಜಯ್ ಹೇಳಿದ್ದಾರೆ.
ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಕರೂರಿಗೆ ಭೇಟಿ ನೀಡಿರುವ ಅವರು ಬೃಹತ್ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ್ದು, ಕಾಲ್ತುಳಿತ ಘಟನೆಗೆ ಪೊಲೀಸರು ಜನಸಂದಣಿಯನ್ನು ಸಮರ್ಪಕವಾಗಿ ನಿರ್ವಹಿಸುವಲ್ಲಿ ವಿಫಲರಾದರು. ಈ ದುರಂತವನ್ನು ಡಿಎಂಕೆ ಸರ್ಕಾರ ನಮ್ಮ ದೋಷಿಸಲು ಪ್ರಯತ್ನಿಸಿದೆ ಎಂದು ಆರೋಪಿಸಿದರು.
ಕಾಲ್ತುಳಿತ ಘಟನೆಯಲ್ಲಿ ಸಾವನ್ನಪ್ಪಿದ ಸಂತ್ರಸ್ತ ಕುಟುಂಬಗಳಿಗೆ ಸರ್ಕಾರಿ ಉದ್ಯೋಗ ನೇಮಕಾತಿ ಪತ್ರವನ್ನು ವಿತರಿಸಿ, ಭಾವುಕರಾದ ವಿಜಯ್, ಅಮಾಯಕ ಜೀವಗಳ ಸಾವಿಗೆ ಕಾರಣವಾದ ಈ ಘಟನೆಯು ನನ್ನ ಜೀವನದ ಯಾವುದೇ ಯಶಸ್ಸು ಅಳಿಸಿಹಾಕಲು ಸಾಧ್ಯವಿಲ್ಲ ಎಂದರು.
ಮನುಷ್ಯ ಜೀನದಲ್ಲಿ ಎಷ್ಟೇ ಎತ್ತರಕ್ಕೆ ಬೆಳೆಯಬಹುದು. ಆದರೆ, ಹೃದಯಕ್ಕೆ ಆದ ಕೆಲವು ನೋವುಗಳು ಮತ್ತು ಗಾಯಗಳನ್ನು ಮರೆಯಲು ಸಾಧ್ಯವಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ, ನನ್ನ ಮೇಲೆ ಅತೀವ ನೋವು ಮತ್ತು ಗಾಯವನ್ನು ಉಂಟುಮಾಡಿದ ಘಟನೆ ಕರೂರ್ ಘಟನೆಯಾಗಿದೆ.
ಚುನಾವಣೆ ಪ್ರಚಾರದ ವೇಳೆ, ರಾಜ್ಯವ್ಯಾಪಿ ಜನರೊಂದಿಗೆ ಸಂವಾದ ಕಾರ್ಯಕ್ರಮವನ್ನು ಸಾರ್ವಜನಿಕರೊಂದಿಗೆ ನೇರವಾಗಿ ಸಂವಹನ ನಡೆಸಲು ಮತ್ತು ಅವರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವ ಉದ್ದೇಶದಿಂದ ನಡೆಸಿದ್ದೆ. ಪೆರಂಬಲೂರ್‌ನಲ್ಲಿನ ಕಾರ್ಯಕ್ರಮವನ್ನು ಜನಸಂದಣಿಯಿಂದ ರದ್ದುಗೊಳಿಸುವಂತೆ ಪೊಲೀಸರು ತಮಗೆ ಸಲಹೆ ನೀಡಿದ್ದರು. ಆದರೆ, ಕರೂರು ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರೂ ಇಂತಹ ಯಾವುದೇ ಎಚ್ಚರಿಕೆಯನ್ನು ನೀಡಲಾಗಿರಲಿಲ್ಲ ಎಂದು ಆರೋಪಿಸಿದರು.
Share