ಶೇ.60ರಷ್ಟು ಸೀಟಿನ ಆಯ್ಕೆಗೆ ಹೆಚ್ಚುವರಿ ಶುಲ್ಕವಿಲ್ಲ; ವಿಮಾನಯಾನ ಸಂಸ್ಥೆಗಳಿಗೆ ಕೇಂದ್ರದ ಸೂಚನೆ

Share
0Shares

March 19, 2026

ನವದೆಹಲಿ: ದೇಶಿಯ ವಿಮಾನ ಪ್ರಯಾಣದಲ್ಲಿ ಸೀಟು ಆಯ್ಕೆಯಲ್ಲಿನ ಹೆಚ್ಚುವರಿ ಶುಲ್ಕವನ್ನು ವಿಧಿಸದಂತೆ ಹಾಗೇ ಒಂದೇ ಪಿಎನ್​ಆರ್​ನಡಿ ಪ್ರಯಾಣಿಸುವ ಪ್ರಯಾಣಿಕರಿಗೆ ಅಕ್ಕಪಕ್ಕದ ಸೀಟು ಹಂಚಿಕೆ ಮಾಡುವಂತೆ ವಿಮಾನಯಾನ ಸಂಸ್ಥೆಗಳಿಗೆ ಕೇಂದ್ರ ಸೂಚನೆ ನೀಡಿದೆ.

ಈ ಕುರಿತು ತಿಳಿಸಿರುವ ಕೇಂದ್ರ, ವಿಮಾನಗಳಲ್ಲಿ ಶೇ. 60 ರಷ್ಟು ಸೀಟುಗಳಿಗೆ ಹೆಚ್ಚುವರಿ ಶುಲ್ಕ ವಿಧಿಸದಂತೆ ಕೇಂದ್ರವು ವಿಮಾನಯಾನ ಸಂಸ್ಥೆಗಳಿಗೆ ನಿರ್ದೇಶನ ನೀಡಿದೆ. ಜೊತೆಗೆ ಒಂದೇ ಪಿಎನ್‌ಆರ್‌ನಲ್ಲಿ ಪ್ರಯಾಣಿಸುವವರು ವಿಮಾನದಲ್ಲಿ ಒಟ್ಟಿಗೆ ಕುಳಿತು ಪ್ರಯಾಣಿಸಲು ಅವಕಾಶ ನೀಡುವುದನ್ನು ಖಚಿತಪಡಿಸಿಕೊಳ್ಳಬೇಕು. ಪ್ರಯಾಣಿಕರ ಸೌಲಭ್ಯವನ್ನು ಬಲಪಡಿಸುವ ಪ್ರಯತ್ನಗಳ ಭಾಗವಾಗಿ ಈ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ಹೇಳಿಕೆಯಲ್ಲಿ ಪ್ರಕಟಿಸಿದೆ.

ವಿಮಾನಯಾನ ಸಂಸ್ಥೆಗಳು ನ್ಯಾಯಯುತ ಪ್ರವೇಶವನ್ನು ಖಚಿತಪಡಿಸಿಕೊಳ್ಳಲು ಯಾವುದೇ ವಿಮಾನದಲ್ಲಿ ಕನಿಷ್ಠ 60ರಷ್ಟು ಸೀಟುಗಳನ್ನು ಉಚಿತವಾಗಿ ಹಂಚಿಕೆ ಮಾಡಬೇಕು ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ)ಕ್ಕೆ ಸಚಿವಾಲಯ ಕೋರಿದೆ.

ಒಂದೇ ಪಿಎನ್‌ಆರ್‌ನಲ್ಲಿ ಪ್ರಯಾಣಿಸುವ ಪ್ರಯಾಣಿಕರು ಒಟ್ಟಿಗೆ ಅಕ್ಕಪಕ್ಕದ ಆಸನದಲ್ಲಿ ಕುಳಿತುಕೊಂಡು ಪ್ರಯಾಣಿಸಬೇಕು. ಈ ಸೂಚನೆಯೂ ಎಲ್ಲಾ ದೇಶಿ ವಿಮಾನಗಳಿಗೆ ಅನ್ವಯಿಸುತ್ತದೆ. ಪ್ರಯಾಣಿಕರ ಅನುಕೂಲವೂ ನಮ್ಮ ಮೊದಲ ಆದ್ಯತೆಯಾಗಿದೆ. ವಿಮಾನಯಾನ ಸಂಸ್ಥೆಗಳಲ್ಲಿ ಪ್ರಯಾಣಿಕರ ಅನುಕೂಲತೆ, ಪಾರದರ್ಶಕತೆ ಕಾಪಾಡಲು ಈ ನಿರ್ದೇಶನ ನೀಡಲಾಗಿದೆ.

ಸುರಕ್ಷತೆ ಮತ್ತು ಕಾರ್ಯಾಚರಣೆಯ ನಿಯಮಗಳಿಗೆ ಒಳಪಟ್ಟು ಪಾರದರ್ಶಕ ಮತ್ತು ಪ್ರಯಾಣಿಕ ಸ್ನೇಹಿ ರೀತಿಯಲ್ಲಿ ಕ್ರೀಡಾ ಉಪಕರಣಗಳು ಮತ್ತು ಸಂಗೀತ ವಾದ್ಯಗಳ ಸಾಗಣೆ ಸುಗಮಗೊಳಿಸಬೇಕು. ಸಾಕುಪ್ರಾಣಿಗಳ ಸಾಗಣೆಗೆ ಸ್ಪಷ್ಟ, ಪಾರದರ್ಶಕ ನೀತಿಗಳನ್ನು ಸಹ ಹೊರಡಿಸಬೇಕು. ವಿಶೇಷವಾಗಿ ವಿಳಂಬ, ರದ್ದತಿ ಮತ್ತು ಬೋರ್ಡಿಂಗ್ ನಿರಾಕರಿಸಿದ ಸಂದರ್ಭಗಳಲ್ಲಿ ಪ್ರಯಾಣಿಕರ ಹಕ್ಕುಗಳ ಚೌಕಟ್ಟನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಎಂದು ತಿಳಿಸಿದೆ.

Share
0Shares

Leave a Reply

Your email address will not be published. Required fields are marked *

error: Content is protected !!
× How can I help you?
ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 94488 74282