ಗದಗ 11 : ಸಾಲಿಡಾರಿಟಿ ಯುಥ್ ಮೂವಮೆಂಟ ಗದಗ ಜಿಲ್ಲೆ ಕಛೇರಿ ಉದ್ಘಾಟನೆ ಮತ್ತು ಸೌಹಾರ್ದ ಇಫ್ತಾರ್ ಕೂಟ ಏರ್ಪಡಿಸಲಾಯಿತು.
ಎಸ್. ವಾಯ್. ಎಂ. ನೂತನ ಕಛೇರಿಯನ್ನು ಶ್ರೀ ವೇದಮೂರ್ತಿ ಮಹೇಶ್ವರ ಸ್ವಾಮಿಗಳು (ಧರ್ಮದರ್ಶಿಗಳು, ಶ್ರೀ ಅಡವೀಂದ್ರಸ್ವಾಮಿ ಮಠ, ಗದಗ) ಉದ್ಘಾಟಿಸಿದರು. ಬ್ರ ಇಲಿಯಾಸ್ ನಾಲಬಂದ (ರಾಜ್ಯ ಕಾರ್ಯದರ್ಶಿಗಳು ಎಸ್.ವಾಯ್.ಎಮ್ ಕರ್ನಾಟಕ) ರಂಜಾನ್ ವಿಶೇಷತೆಯ ಬಗ್ಗೆ ಉಪನ್ಯಾಸ ನೀಡಿದರು ಮತ್ತೋರ್ವ ಮುಖ್ಯ ಅತಿಥಿಯಾಗಿ ಗದಗ ಜಿಲ್ಲೆಯ ಯುವ ಕಾಂಗ್ರೆಸ್ ಅಧ್ಯಕ್ಷರಾದ ಕೃಷ್ಣಗೌಡ ಪಾಟೀಲ್ ಯುವಕರನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಜನಾಬ್ ಕೆ ಐ ಶೇಕ್, ಜನಾಬ್ ಮುನ್ನಾ ಕಲ್ಮನಿ, ಸ್ಥಾನಿಕ ಅಧ್ಯಕ್ಷರು ಎಪಿಸಿಆರ್. ಗದಗ, ಎಸ್ ಎನ್ ಬಳ್ಳಾರಿ, ಶರೀಫ ಬಿಳೆಯಲಿ, ಮೊಹಮ್ಮದ್ ಯೂಸುಫ್ ಮುಲ್ಲಾ ನಗರಾಧ್ಯಕ್ಷರು ಎಸ್. ವಾಯ್.ಎಂ ಗದಗ ಮತ್ತು ಕಾರ್ಯಕ್ರಮದಲ್ಲಿ ಗದಗ ಜಿಲ್ಲೆ ದಲಿತ ಸಂಘಟನೆಗಳ ಒಕ್ಕೂಟ ಹಾಗೂ ದಲಿತ ಕಲಾ ಮಂಡಳಿ, ಸರ್ವ ಸದಸ್ಯರು ಹಾಜರಿದ್ದರು.
Share
