ಕೊಚ್ಚಿ: ‘ದಿ ಕೇರಳ ಸ್ಟೋರಿ – ಗೋಸ್ ಬಿಯಾಂಡ್’ ಚಿತ್ರವು ಕೇರಳದಂತದ ಜಾತ್ಯತೀತ ರಾಜ್ಯವನ್ನು ತಪ್ಪು ರೀತಿಯಲ್ಲಿ ಬಿಂಬಿಸುತ್ತದೆ ಎಂದು ಕೇರಳ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಕೇರಳದಲ್ಲಿ ಜನರು ಕೋಮು ಸೌಹಾರ್ದದಲ್ಲಿ ಬದುಕುತ್ತಾರೆ. ಹಾಗಿರುವಾಗ ಕೇರಳದ ಹೆಸರನ್ನು ಬಳಕೆ ಮಾಡುವುದು ಮತ್ತು ಚಿತ್ರವು ನೈಜ ಸಂಗತಿಗಳನ್ನು ಆಧರಿಸಿದೆ ಎಂದು ಹೇಳಿಕೊಳ್ಳುವುದು ಕೋಮು ಉದ್ವಿಗ್ನತೆಗೆ ಕಾರಣವಾಗಬಹುದು ಎಂದು ಅಭಿಪ್ರಾಯಪಟ್ಟಿದೆ
ಕೇರಳ ಸ್ಟೋರಿ 2 ಚಿತ್ರಕ್ಕೆ ನೀಡಲಾದ ಪ್ರಮಾಣೀಕರಣವನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾದ ಮೂರು ಪ್ರತ್ಯೇಕ ಅರ್ಜಿಗಳ ಕುರಿತು ವಿಚಾರಣೆ ನಡೆಸಿದ ನ್ಯಾಯಾಮೂರ್ತಿ ಬೆಚು ಕುರಿಯನ್ ಥಾಮಸ್ ಅವರು ಈ ಕುರಿತು ಉಲ್ಲೇಖಿಸಿದ್ದಾರೆ.
ಈ ಸಂದರ್ಭದಲ್ಲಿ ಚಿತ್ರದ ಟೀಸರ್ ತೆಗೆಯಲು ಸಿದ್ಧವಿರುವುದಾಗಿ ನಿರ್ಮಾಪಕ ನ್ಯಾಯಾಲಯಕ್ಕೆ ತಿಳಿಸಿದರು.
Share