ಸಿದ್ದರಾಮಯ್ಯರ ರಾಜಕೀಯ ಅಡಿಪಾಯವೇ ಸಾಮಾಜಿಕ ನ್ಯಾಯ: ಪರಮೇಶ್ವರ್‌

Share
0Shares

ಬೆಂಗಳೂರು: ಸಿಎಂ ಸಿದ್ದರಾಮಯ್ಯ – ಕೇಂದ್ರ ಸಚಿವ ಕುಮಾರಸ್ವಾಮಿ ನಡುವಿನ ಜಟಾಪಟಿಯಲ್ಲಿ ಸಾಮಾಜಿಕ ನ್ಯಾಯದ ಬಗ್ಗೆ ಸಿಎಂ ಸಿದ್ದರಾಮಯ್ಯ ನಿಲುವುಗಳನ್ನು ಗೃಹಸಚಿವ ಪರಮೇಶ್ವರ್ ಸಮರ್ಥಿಸಿಕೊಂಡಿದ್ದಾರೆ.

ಸಿದ್ದರಾಮಯ್ಯ ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿದ್ದಾರೆ. ಅವರ ಇಡೀ ಜೀವನ ಸಾಮಾಜಿಕ ನ್ಯಾಯದ ಸಿದ್ಧಾಂತದಡಿಯೇ ರಾಜಕಾರಣ ಮಾಡಿಕೊಂಡು ಬಂದಿರೋದು. ಅದರಲ್ಲಿ ಹೊಸದೇನೂ ಇಲ್ಲ. ಅವರ ರಾಜಕೀಯ ಅಡಿಪಾಯವೇ ಸಾಮಾಜಿಕ ನ್ಯಾಯ ಎಂದು ಸಿಎಂ ಪರ ಬ್ಯಾಟಿಂಗ್ ಮಾಡಿದ್ದಾರೆ.

ಸಿದ್ದರಾಮಯ್ಯ ಮೊದಲು ಜೆಡಿಎಸ್‌ನಲ್ಲಿದ್ರು, ಅಧ್ಯಕ್ಷರಾಗಿದ್ರು. ನಂತರ ಅವರನ್ನ ಪಕ್ಷದಿಂದ ಹೊರಗೆ ಹಾಕಿದ್ರು. ಏನೆಲ್ಲ ವಿಚಾರಗಳು ಇರ್ತವೋ ನಮಗೆ ತಿಳಿದಿರಲ್ಲ. ಅವರಿಬ್ಬರ ವಾಕ್ಸಮರ ಬಗ್ಗೆ ನಾನು ಉತ್ತರ ಕೊಡಕ್ಕಾಗಲ್ಲ ಎಂದಿದ್ದಾರೆ.

ಇದೇ ವೇಳೆ ಪವರ್ ಶೇರ್ ಗಲಾಟೆ ಗ್ಯಾಪ್‌ನಲ್ಲಿ ದಲಿತ ಸಿಎಂ ಕಾರ್ಡ್ ಪ್ಲೇ ಮಾಡಿದ ಸಿಎಂ ಆಪ್ತ ಸಚಿವ ಮಹದೇವಪ್ಪ ವಿರುದ್ಧ ಡಿಕೆ ಸುರೇಶ್ ಸೇರಿದಂತೆ ಡಿಕೆ ಆಪ್ತರೆಲ್ಲಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ವಿಚಾರಕ್ಕೆ ಪ್ರತಿಕ್ರಿಯಿಸಿದ ಗೃಹಸಚಿವ ಪರಮೇಶ್ವರ್, ದಲಿತರನ್ನು ಸಿಎಂ ಮಾಡೋದು ಕಾಂಗ್ರೆಸ್ ಪಕ್ಷನೇ, ಇನ್ಯಾರು ಮಾಡ್ತಾರೆ. ಯಾವಾಗ ದಲಿತ ಸಿಎಂ ಮಾಡಬೇಕು ಅಂತ ಹೈಕಮಾಂಡ್ ತೀರ್ಮಾನ ಮಾಡುತ್ತೆ. ವಿಪಕ್ಷಗಳಿಗೆ ತಮ್ಮ ಹುಳುಕು ಮುಚ್ಚಿಕೊಳ್ಳಲು ದಲಿತ ಸಿಎಂ ಕೂಗು ತಂದಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.

Share
0Shares

Leave a Reply

Your email address will not be published. Required fields are marked *

error: Content is protected !!
× How can I help you?
ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 94488 74282