5 ಲಕ್ಷಕ್ಕೂ ಅಧಿಕ ಹಣ ಜಪ್ತಿ : 61 ಜೂಜಾಟದ ಅಡ್ಡೆ ಮೇಲೆ ಖಾಕಿ ರೈಡ್ ಅಂದರ – ಬಾಹರ್ ಆಡಿದವರು ಖಾಕಿ ರೈಡಲ್ಲಿ 463 ಜನ ಅಂದರ್ ಸಮಗ್ರ ಪ್ರಭ ವಿಶೇಷ ಸುದ್ದಿ

Share
0Shares

ಗದಗ: ದೀಪಾವಳಿ ಹಬ್ಬದಂದು ದೀಪ ಕಾಯುವ ನೆಪದಲ್ಲಿ ಮನೆ ಅಂಗಡಿ ಸೇರಿದಂತೆ ವಿವಿಧೆಡೆ ಇಸ್ಪೇಟ ಎಲೆಗಳಿಂದ ಜೂಜಾಟ ಆಡುತ್ತಿದ್ದವರ ಮೇಲೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.

ದೀಪಾವಳಿ ಹಬ್ಬದ ನೆಪದಲ್ಲಿ ಜೂಜಾಟ ಇಸ್ಪೆಟ್ ಆಡದಂತೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಖಡಕ್ ಎಚ್ಚರಿಕೆ ನೀಡಿದ್ದರು ಅದನ್ನು ಮೀರಿ ಆಡಿದರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದ್ದರು ಅದನ್ನು ಮರೆತು ಮನಸ್ಸೋ ಇಚ್ಛೆ ಆಡಿದವರು ಇಂದು ಖಾಕಿ ರೈಡ್ ನಲ್ಲಿ ಸಿಲುಕಿಕೊಂಡಿದ್ದಾರೆ.

ದೀಪಾವಳಿ ಹಬ್ಬದ ವೇಳೆ ಜಿಲ್ಲೆಯ ವಿವಿಧ ತಾಲೂಕು ಹಾಗೂ ನಗರ ಪ್ರದೇಶಗಳಲ್ಲಿ ಮೂರು ದಿನಗಳಲ್ಲಿ ಜಿಲ್ಲಾಧ್ಯಂತ 61 ಜೂಜಾಟ ಅಡ್ಡೆಗಳಲ್ಲಿ ದಾಳಿ ನಡೆಸಿ 463 ಜೂಜುಕೋರರ ವಿರುದ್ದ ಪ್ರಕರಣ ದಾಖಲಿಸಿ ಅವರಿಂದ 5.15 ಲಕ್ಷ ವಶಕ್ಕೆ ಪಡೆದುಕೊಂಡಿದ್ದಾರೆ.

ಈ ದಾಳಿಯಲ್ಲಿ ಪೊಲೀಸರ ತಂಡಗಳು ಒಟ್ಟು 5,15,650 ನಗದನ್ನು ವಶಪಡಿಸಿಕೊಂಡಿವೆ.

ಜಿಲ್ಲೆಯ ಗದಗ ಗ್ರಾಮೀಣ, ಶಿರಹಟ್ಟಿ, ರೋಣ, ಲಕ್ಷ್ಮೇಶ್ವರ, ಮುಂಡರಗಿ, ಗಜೇಂದ್ರಗಡ, ಮುಳಗುಂದ, ಬೆಟಗೇರಿ ಬಡಾವಣೆ, ನರೇಗಲ್ ಸೇರಿದಂತೆ 12 ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಈ ಕಾರ್ಯಾಚರಣೆ ನಡೆದಿದೆ.

ಜೂಜಾಟದ ಆಡುವವರ ವಿರುದ್ಧ ಇನ್ನಷ್ಟು ಅಡ್ಡೆಗಳನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ತಿಳಿಸಿದ್ದಾರೆ.

ಬಾಕ್ಸ :

ಬೆಟಗೇರಿ ಮನೆಯಲ್ಲಿ ಜೂಜಾಟ 13 ಜನರ ವಿರುದ್ದ ಪ್ರಕರಣ:

ಬೆಟಗೇರಿಯ ಶರಣಬಸ್ವೇಶರ ನಗರದಲ್ಲಿನ ಶಂಕರ ಜಿತೋರಿ ಅವರ ನಿವಾಸದಲ್ಲಿ ದಾಳಿ ನಡೆಸಿದ ಬೆಟಗೇರಿ ಪೋಲಿಸರು ಜೂಜಾಟದಲ್ಲಿ ತೊಡಗಿದ್ದ 13 ಜನರನ್ನು ಬಂಧಿಸಿ ಪ್ರಕರಣ ದಾಖಲಿಸಿ ಅವರಿಂದ 23,830 ರೂಪಾಯಿಗಳನ್ನು ವಶಕ್ಕೆ ಪಡೆದಿದ್ದಾರೆ.

Share
0Shares

Leave a Reply

Your email address will not be published. Required fields are marked *

error: Content is protected !!
× How can I help you?
ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 94488 74282