ಬೆಂಗಳೂರು: ಹೇಳಿಕೆಯ ಬಗ್ಗೆ ನಾನು ಯತೀಂದ್ರನನ್ನು ಕೇಳ್ದೆ, ಸೈದ್ಧಾಂತಿಕವಾಗಿ ಮಾತನಾಡಿದ್ದೇನೆ ಅಂದ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ವಿಧಾನಸೌಧದಲ್ಲಿಂದು ಮಾತನಾಡಿದ ಅವರು, ನಾನು ಆ ಬಗ್ಗೆ ಯತೀಂದ್ರನನ್ನು ಕೇಳ್ದೆ. ನೀನು ಏನು ಮಾತನಾಡಿದ್ದೀಯ ಎಂದೆ. ಸೈದ್ಧಾಂತಿಕವಾಗಿ ಮಾತ್ರ ಮಾತನಾಡಿದ್ದೇನೆ, ಇಂಥವರೇ ಮುಂದಿನ ಮುಖ್ಯಮಂತ್ರಿ ಆಗ್ತಾರೆ ಅಂತ ಹೇಳಿಲ್ಲ ಅಂದ. ಅವನ ಹೇಳಿಕೆಯನ್ನು ತಿರುಚಿದರೆ ಏನು ಮಾಡುವುದು? ಎಂದರು.
ಈ ಸಂದರ್ಭದಲ್ಲಿ ಆ ರೀತಿಯ ಹೇಳಿಕೆಯ ಅಗತ್ಯವಿದೆಯೇ ಎಂಬ ಪ್ರಶ್ನೆಗೆ, ಯಾರೋ ನಿಮ್ಮಂಥವರು ಕೇಳಿರಬಹುದು. ಯಾರೋ ಪ್ರಶ್ನೆಗಳನ್ನು ಕೇಳಿದ್ದಾರೆ. ಈಗ ನಾನು ಸಹಕಾರ ಸಪ್ತಾಹದ್ದು ಹೇಳ್ದೆ. ಈಗ ನೀವು ಕೇಳಲಿಲ್ವೇ? ಹಾಗೆ ಕೇಳಿರುತ್ತಾರೆ. ಅದಕ್ಕೆ ಅಲ್ಲಿ ಹೇಳಿದ್ದಾನೆ ಎಂದರು.
Share