ಚೆನ್ನೈ: ‘ಹಲವು ಮಕ್ಕಳ ಸಾವಿಗೆ ಕಾರಣವಾಗಿರುವ ‘ಕೋಲ್ಡ್ರಿಫ್’ ಎಂಬ ಕೆಮ್ಮಿನ ಸಿರಪ್ನ ಕಲಬೆರಕೆಯಲ್ಲಿ ಕರ್ತವ್ಯಲೋಪ ಎಸಗಿದ ಇಬ್ಬರು ಡ್ರಗ್ ಇನ್‌ಸ್ಪೆಕ್ಟರ್‌ಗಳನ್ನು ಅಮಾನತುಗೊಳಿಸಲಾಗಿದೆ. ಫಾರ್ಮಾ ಕಂಪನಿಯನ್ನು ಶಾಶ್ವತವಾಗಿ ಮುಚ್ಚಲಾಗಿದೆ’ ಎಂದು ತಮಿಳುನಾಡು ಆರೋಗ್ಯ ಸಚಿವ ಮಾ ಸುಬ್ರಹ್ಮಣಿಯನ್ ತಿಳಿಸಿದ್ದಾರೆ.
ಕಳೆದೆರಡು ವರ್ಷದಲ್ಲಿ ಸ್ರೇಸನ್ ಫಾರ್ಮಾಸ್ಯುಟಿಕಲ್ ಕಂಪನಿಯ ತಯಾರಿಕ ಕೇಂದ್ರಕ್ಕೆ ತೆರಳಿ ಏಕೆ ಪರೀಕ್ಷೆ ನಡೆಸಿರಲಿಲ್ಲ ಎಂದು ನೋಟಿಸ್ ನೀಡಲಾಗಿತ್ತು, ಬಳಿಕ ಅವರನ್ನು ಅಮಾನತುಗೊಳಿಸಲಾಗಿದೆ’ ಎಂದು ಹೇಳಿದ್ದಾರೆ.
‘ಕೆಮ್ಮಿನ ಸಿರಪ್ನಲ್ಲಿ ಕಲಬೆರಕೆಯಾಗಿರುವುದನ್ನು ತಮಿಳುನಾಡು ಮೊದಲು ಖಚಿತಪಡಿಸಿ, ನಂತರ ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಮಾಹಿತಿ ನೀಡಿತ್ತು. ಇದಾದ ಬಳಿಕ ಮಧ್ಯಪ್ರದೇಶ, ಒಡಿಶಾ, ಪುದುಚೇರಿಗೂ ಮಾಹಿತಿ ನೀಡಲಾಗಿತ್ತು’ ಎಂದು ತಿಳಿಸಿದ್ದಾರೆ.
‘ಅಕ್ಟೋಬರ್ 3ರಂದೇ ಕೆಮ್ಮಿನ ಸಿರಪ್ ತಯಾರಿಕೆಯನ್ನು ಸ್ಥಗಿತಗೊಳಿಸಿದ್ದು, ಕಂಪನಿಯ ಉತ್ಪಾದನಾ ಲೈಸೆನ್ಸ್ ಅನ್ನು ತಾತ್ಕಲಿಕವಾಗಿ ಹಿಂದಕ್ಕೆ ಪಡೆಯಲಾಗಿತ್ತು. ಅ.7ರಂದು ರಂಗನಾಥನ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ, ಅ.8ರಂದು ಬಂಧಿಸಿದ್ದೇವೆ’ ಎಂದು ಮಾಹಿತಿ ನೀಡಿದ್ದಾರೆ.
Share