ಮುಂದಿನ 5 ವರ್ಷಗಳಲ್ಲಿ ಭಾರತದಲ್ಲಿ ಹೆಚ್ಚುವರಿಯಾಗಿ 75,000 ಎಂಬಿಬಿಎಸ್ ಸೀಟುಗಳು ಲಭ್ಯ: ನಡ್ಡಾ

Share
0Shares

ನವದೆಹಲಿ: ಮುಂದಿನ ಐದು ವರ್ಷಗಳಲ್ಲಿ ಭಾರತವು ಹೆಚ್ಚುವರಿಯಾಗಿ 75,000 MBBS (ಯುಜಿ) ಸೀಟುಗಳನ್ನು ಹೊಂದುವ ಗುರಿಯನ್ನು ಹೊಂದಿದೆ ಎಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಗುರುವಾರ ಹೇಳಿದ್ದಾರೆ.

ಆರೋಗ್ಯ ಕ್ಷೇತ್ರದ ಗುಣಮಟ್ಟವನ್ನು ಕಾಪಾಡಿಕೊಂಡು ಶಿಕ್ಷಣ ಸಾಮರ್ಥ್ಯವನ್ನು ವಿಸ್ತರಿಸುವ ಪ್ರಯತ್ನದ ಬಗ್ಗೆ ಕೇಂದ್ರ ಆರೋಗ್ಯ ಜೆ.ಪಿ.ನಡ್ಡಾ ಅವರು ಮಾತನಾಡಿದ್ದಾರೆ. ನವದೆಹಲಿಯಲ್ಲಿ ನಡೆದ ‘FICCI HEAL 2025’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಂದಿನ ಐದು ವರ್ಷಗಳಲ್ಲಿ 75,000 ಹೆಚ್ಚುವರಿ ಯುಜಿ ಸೀಟುಗಳು ಸೇರ್ಪಡೆ ಮಾಡಲಿದ್ದೇವೆ. ಈಗಾಗಲೇ 76,000 ಸ್ನಾತಕೋತ್ತರ (PG) ಸೀಟುಗಳಿವೆ. ಈ ಹೆಚ್ಚಳದೊಂದಿಗೆ ಗುಣಮಟ್ಟದಲ್ಲೂ ರಾಜಿಯಾಗದಂತೆ ನೋಡಿಕೊಳ್ಳಲು ನಾವು ಪ್ರಯತ್ನಿಸುತ್ತಿದ್ದೇವೆ. ಏಕೆಂದರೆ ಅದು ಈಗಿನ ಅಗತ್ಯವಾಗಿದೆ ಎಂದರು.

ಎಂಬಿಬಿಎಸ್ ಸೀಟುಗಳ ಸಂಖ್ಯೆ ಮತ್ತು ವೈದ್ಯಕೀಯ ಮೂಲಸೌಕರ್ಯದ ಕುರಿತು ಮಾತನಾಡಿದ ನಡ್ಡಾ, ವಿಕಸಿತ್​ ಭಾರತದ ದೃಷ್ಟಿಕೋನವನ್ನು ನಾವು ಪೂರೈಸಲು ಬಯಸಿದರೆ, ಮುಂಬರುವ ವರ್ಷಗಳಲ್ಲಿ ನಮಗೆ 20 ಲಕ್ಷ ಹಾಸಿಗೆಗಳು ಮತ್ತು ಪ್ರತಿ 1000 ರೋಗಿಗಳಿಗೆ ಎರಡು ಹಾಸಿಗೆಗಳು ಬೇಕಾಗುತ್ತದೆ ಎಂದು ಹೇಳಿದರು.

ಮೊದಲು ಕೇವಲ 387 ವೈದ್ಯಕೀಯ ಕಾಲೇಜುಗಳಿದ್ದವು ಮತ್ತು ಈಗ ನಮ್ಮಲ್ಲಿ 810 ವೈದ್ಯಕೀಯ ಕಾಲೇಜುಗಳಿದ್ದು, ಯುಜಿ ಮಟ್ಟದಲ್ಲಿ ಸೀಟುಗಳು 51,000 ರಿಂದ 1,25,000 ಕ್ಕೆ ಹೆಚ್ಚಿವೆ ಎಂದು ಅವರು ಮಾಹಿತಿ ನೀಡಿದರು.

ಆಯುಷ್ಮಾನ್ ಭಾರತ್ ಇಂದು ವಿಶ್ವದ ಅತಿದೊಡ್ಡ ಸಾರ್ವತ್ರಿಕ ಆರೋಗ್ಯ ವಿಮಾ ಕಾರ್ಯಕ್ರಮವಾಗಿದೆ. ಸುಮಾರು 62 ಕೋಟಿ ನಾಗರಿಕರು ಅಥವಾ ಭಾರತೀಯ ಜನಸಂಖ್ಯೆಯ ಶೇಕಡಾ 40 ಕ್ಕಿಂತ ಹೆಚ್ಚು ಜನರು 5 ಲಕ್ಷ ರೂ. ಆರೋಗ್ಯ ವಿಮಾ ರಕ್ಷಣೆಯನ್ನು ಹೊಂದಿದ್ದಾರೆ. 70 ವರ್ಷಕ್ಕಿಂತ ಮೇಲ್ಪಟ್ಟ ಪ್ರತಿಯೊಬ್ಬ ವ್ಯಕ್ತಿಯು ಸಾಯುವವರೆಗೂ ಆಯುಷ್ಮಾನ್ ಭಾರತ ವಿಮಾ ರಕ್ಷಣೆಗೆ ಅರ್ಹರಾಗಿರುತ್ತಾರೆ ಎಂದು ನಡ್ಡಾ ಹೇಳಿದರು.

Share
0Shares

Leave a Reply

Your email address will not be published. Required fields are marked *

WP2Social Auto Publish Powered By : XYZScripts.com
error: Content is protected !!
× How can I help you?
ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 94488 74282