ಚಂಡೀಗಢ: ಪಂಜಾಬ್‌ನಲ್ಲಿ ನಿರಂತರ ಮಳೆಯಿಂದ ಪ್ರವಾಹ ಭೀತಿ ಉಂಟಾಗಿದೆ. ಇದರ ಪರಿಣಾಮ ಅಲ್ಲಿನ ಕಾಲೇಜು, ವಿಶ್ವವಿದ್ಯಾಲಯಗಳಿಗೆ ಹಾಗೂ ಪಾಲಿಟೆಕ್ನಿಕ್ ಸಂಸ್ಥೆಗಳಿಗೆ ಆಗಸ್ಟ್ 27 ರಿಂದ 30 ರವರೆಗೆ ಎಲ್ಲಾ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಮಳೆ ಹೆಚ್ಚಾದ ಕಾರಣ ಸೆಪ್ಟೆಂಬರ್ 3 ರವರೆಗೆ ರಜೆ ಮುಂದೂಡಲಾಗಿದೆ.
ಹಿಮಾಚಲ ಪ್ರದೇಶ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರಿ ಮಳೆಯಿಂದಾಗಿ ಸಟ್ಲೆಜ್, ಬಿಯಾಸ್ ಮತ್ತು ರಾವಿ ನದಿಗಳು ಉಕ್ಕಿ ಹರಿಯುತ್ತಿರುವುದರಿಂದ ಪಂಜಾಬ್‌ನಲ್ಲಿ ಭಾರಿ ಪ್ರವಾಹ ಉಂಟಾಗಿದೆ.
ಪ್ರವಾಹದಿಂದ ಪಂಜಾಬ್‌ನ ಗುರುದಾಸ್ಪುರ್, ಪಠಾಣ್‌ಕೋಟ್, ಫಜಿಲ್ಕಾ, ಕಪುರ್ತಲಾ, ತರಣ್, ಫಿರೋಜ್‌ಪುರ, ಹೋಶಿಯಾರ್‌ಪುರ್ ಮತ್ತು ಅಮೃತಸರ ಜಿಲ್ಲೆಗಳು ಸಂಪೂರ್ಣ ಜಲಾವೃತ ಆಗಿವೆ.
