ಡಾ|| ವೆಂಕಟೇಶ ರಾಥೋಡ್ ನೇತೃತ್ವದಲ್ಲಿ ಅನಧಿಕೃತ ಧೂಮಪಾನ ಅಡ್ಡಾ ಮೇಲೆ ದಾಳಿ 49 ಪ್ರಕರಣ ದಾಖಲೆ

Share
0Shares

ಗದಗ : ಜಿಲ್ಲೆಯ ಕೆಲವು ಪಾನ್ ಬೀಡಾ ಅಂಗಡಿ ,ಹೋಟೆಲ್,ಬಾರ್‌ಗಳಲ್ಲಿ ಅನಧಿಕೃತ ಧೂಮಪಾನ ಅಡ್ಡಾಗಳು ಮಾಡಿಕೊಂಡು ಸಾರ್ವಜನಿಕರ ಜೀವದ ಜೋತೆ ಚೆಲ್ಲಾಟವಾಡುತ್ತಿದ್ದು ,ಈ ರೀತಿಯ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವದರಿಂದ ಅವರು ಸೇವಿಸಿ ಬಿಟ್ಟ ಹೊಗೆಯಿಂದ ಅಮಾಯಕರು ಆ ಹೊಗೆ ಸೇವನೆಯಿಂದ ಪರೋಕ್ಷ ಧೂಮಪಾನಿಗಳಾಗಿ ತಂಬಾಕು ಸೇವೆನೆಯಿಂದಾಗು ಅಪಾಯಕಾರಿ ಕ್ಯನ್ಸರ್, ಹೃದಯ ಸಂಬಂಧಿ ಕಾಯಿಲೆ, ಪಾರ್ಶ್ವವಾಯ, ಇತರ ಮಾರಣಾಂತಿಕ ಕಾಯಿಲೆಗಳಿಗೆ ಬಲಿಯಾಗುತ್ತಾರೆ, ಎಂದು ಜಿಲ್ಲಾ ಸಮೀಕ್ಷಣಾಧಿಕಾರಿ ಡಾ.ವೆಂಕಟೇಶ ರಾಥೋಡ್ ಇವರ ತಿಳಿಸುತ್ತಾರೆ.

ಆಗಸ್ಟ ತಿಂಗಳಿನಲ್ಲಿ ಜಿಲ್ಲಾ ಸಮೀಕ್ಷಣಾಧಿಕಾರಿ ಡಾ.ವೆಂಕಟೇಶ ರಾಥೋಡ್ ಇವರ ಮಾರ್ಗದರ್ಶನದಲ್ಲಿ ಜಿಲ್ಲೆಯ ಬೆಟಗೇರಿ ಭಾಗದಲ್ಲಿ, ರೋಣ ಪಟ್ಟಣ, ವಿವಿದೆಡೆ ಕೋಟ್ಪಾ ದಾಳಿ ಹಮ್ಮಿಕೊಂಡು ತಂಬಾಕು ನಿಯಂತ್ರಣ ಕೋಟ್ಪಾ ಕಾಯ್ದೆ 2003 ಉಲ್ಲಂಘನೆ ಜಾಗೃತಿ ಮೂಡಿಸಿ ,ಎಚ್ಚರಿಕೆ ನೀಡಿ 49 ಪ್ರಕರಣ ದಾಖಲಿಸಿ, ರೂ. 13900 ದಂಡ ಸಂಗ್ರಹಿಸಲಾಗಿದೆ,

ರಾಜ್ಯ ಸರ್ಕಾರ ಮೇ 31 .2025 ರಂದು ಮಹತ್ತರದ ನಿರ್ಣಯ ಕೈಗೊಂಡು ಕೋಟ್ಪಾ ಕಾಯ್ದೆಯಲ್ಲಿ ತಿದ್ದುಪಡಿಮಾಡಲಾಗಿ ಈ ಮೊದಲು ಸೆಕ್ಷನ್ 4 ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡಿದರೆ ರೂ.200/-ವರೆಗೆ ದಂಡವಿರುವದನ್ನು ,ಈಗ ದಂಡದ ಮೊತ್ತ ರೂ.1000/- ವಾಗಿದ್ದು ಧೂಮಪಾನದ ಜೊತೆಗೆ ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವದನ್ನು ನಷೇಧಿಸಲಾಗಿದೆ.

ಹಾಗೂ ಸೆಕ್ಷನ್ 6ಎ ಶಾಲಾ ಕಾಳೇಜುಗಳ ಸುತ್ತ 100 ಗಜದ ವರೇಗೆ ತಂಬಾಕು ಉತ್ಪನ್ನಗಳ ನಿಷೇಧಕ್ಕ ಹಾಗೂ ಸೆಕ್ಷನ್ 6ಬಿ 18 ವರ್ಷದೋಳಗಿನ ಬದಲಿಗೆ 21 ವರ್ಷದೊಳಗಿನವರಿಗೆ ತಂಬಾಖು ಉತ್ಪನ್ನನಿಷೇಧಿಸಲಾಗಿದ್ದು ಈ ಸೆಕ್ಷನ್ ಈ ಮೊದಲು ರೂ.200/-ಇದ್ದು ಸದರಿ ರೂ.1000/-ವರೆಗೆ ದಂಡ ಹೆಚ್ಚಿಸಲಾಗಿದೆ.

ಕಾರಣ ಶಲಾ ಕಾಲೇಜುಗಳ ಸುತ್ತಲಿನ ತಂಬಾಕು ಮಾರಾಟಗಾರರು ಮಾರಾಟ ನಿಲ್ಲಿಸದಿದ್ದಲ್ಲಿ ಮುಂದಿನ ದಿನ ಕಾನೂನು ರೀತಿ ಕಠಿಣ ಕ್ರಮ ಕೈಗೊಳ್ಳಲಾಗುವದೆಂದು ಜಿಲ್ಲಾ ಸಮೀಕ್ಷಣಾಧಿಕಾರಿಗಳು ತಿಳಿಸಿದರು.

Share
0Shares

Leave a Reply

Your email address will not be published. Required fields are marked *

WP2Social Auto Publish Powered By : XYZScripts.com
error: Content is protected !!
× How can I help you?
ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 94488 74282