ಗದಗ (ಕರ್ನಾಟಕ ವಾರ್ತೆ) ಜೂನ್ 25: ಸರ್ಕಾರದ ಆದೇಶದನ್ವಯ ಜುಲೈ 10 ರಂದು ಆಚರಿಸಲಾಗುವ ಹಡಪದ ಅಪ್ಪಣ್ಣನವರ ಜಯಂತಿ ನಿಮಿತ್ಯ ಜೂನ್ 27 ರಂದು ಶುಕ್ರವಾರ ಸಂಜೆ 5 ಗಂಟೆಗೆ ಅಪರ ಜಿಲ್ಲಾಧಿಕಾರಿಗಳು, ಗದಗ ಇವರ ಅಧ್ಯಕ್ಷತೆಯಲ್ಲಿ ಜಿಲ್ಲಾದಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆಯನ್ನು ಕರೆಯಲಾಗಿದೆ. ಸಭೆಗೆ ಹಾಜರಾಗಿ ಸಲಹೆ/ ಅಭಿಪ್ರಾಯ ನೀಡಬೇಕೆಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Share