ಅಖಿಲ ಕರ್ನಾಟಕ ಮುಸ್ಲಿಂ ಮಹಾಸಭಾ ಕಚೇರಿ ನಡೆದ ಸಭೆಯಲ್ಲಿ ಶ್ರೀರಂಗಪಟ್ಟಣದ ಶಾಸಕರ ಹೇಳಿಕೆಯನ್ನು ಸಭೆಯಲ್ಲಿ ಖಂಡಿಸಲಾಯಿತು. ಸಭೆಯಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷರಾದ ಮಹ್ಮದಶಫಿ ನಾಗರಕಟ್ಟಿ ಶ್ರೀರಂಗಪಟ್ಟಣದ ಶಾಸಕರು ಮುಸ್ಲಿಂ ಸಮುದಾಯದವರು ಭೂಮಿಗಾಗಿ ಅರ್ಜಿ ಸಲ್ಲಿಸಿದರೆ ಆ ಅರ್ಜಿಯನ್ನು ಪುರಸ್ಕರಿಸಿ ಅವರಿಗೆ ಭೂಮಿಯನ್ನು ನೀಡಿದರೆ ಅಂತ ಅಧಿಕಾರಿಗಳಿಗೆ ನಾನು ಗಲ್ಲಿಗೇರಿಸುತ್ತೇನೆ ಎಂದು ಬಹಿರಂಗವಾಗಿ ಹೇಳಿಕೆ ನೀಡಿರುವುದು ಅವರೊಬ್ಬ ಜನಪ್ರತಿನಿಧಿಯಾಗಿರಲು ಅರ್ಹತೆಯನ್ನು ಕಳೆದುಕೊಂಡಿದ್ದಾರೆ. ಸರ್ಕಾರಿ ಅಧಿಕಾರಿಗಳಿಗೆ ಜೀವ ಬೆದರಿಕೆ ನೀಡುವುದು ಅವರ ಕರ್ತವ್ಯಕ್ಕೆ ಅಡ್ಡಿಪಡಿಸುವುದು ಇದು ಕ್ರಿಮಿನಲ್ ಸಂಗತಿ ಆಗಿರುತ್ತದೆ. ಸರ್ಕಾರಿ ಅಧಿಕಾರಿಗಳು ಅರ್ಜಿಗಳನ್ನು ಪರಿಶೀಲಿಸಿ ಯೋಗ್ಯವಾಗಿರುವ ವ್ಯಕ್ತಿಗಳಿಗೆ ಸೌಲಭ್ಯಗಳು ನೀಡುತ್ತಾರೆ. ಸರ್ಕಾರಿ ಅಧಿಕಾರಿಗಳನ್ನು ತುಚ್ಚವಾಗಿ ಅವರನ್ನು ಕಾಣುವುದು ಮತ್ತು ಅವರಿಗೆ ಜೀವ ಬೆದರಿಕೆ ಹಾಕುವುದು ಒಬ್ಬ ಜನ ಪ್ರತಿನಿಧಿಗೆ ಶೋಭೆ ತರುವಂತಹ ಕಾರ್ಯವಲ್ಲ. ಒಂದು ಸಮುದಾಯದವರಿಗೆ ಸರ್ಕಾರದ ಸೌಲಭ್ಯಗಳನ್ನು ದೊರಕಬಾರದೆಂದು ಹೇಳಿಕೆ ನೀಡುವುದು ಸಂವಿಧಾನ ವಿರೋಧಿ ನಡೆಯಾಗಿರುತ್ತದೆ. ಒಬ್ಬ ಜನ ಪ್ರತಿನಿಧಿಯಾಗಿ ಸಮಸ್ತ ಜನರ ಏಳಿಗೆಯನ್ನು ಬಯಸುವವನೇ ನಿಜವಾದ ಜನಪ್ರತಿನಿಧಿಯಾಗಿರುತ್ತಾನೆ. ಅದರಲ್ಲೂ ಅತ್ಯಂತ ಹಿಂದುಳಿದ ಸಮುದಾಯಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವುದು ಜನಪ್ರತಿನಿಧಿಯ ಮಹತ್ವದ ಜವಾಬ್ದಾರಿಯಾಗಿರುತ್ತದೆ. ಭಾರತ ಸರ್ಕಾರ ಅದೀನದಲ್ಲಿ ರಚನೆಯಾದ ಸಾಚಾರ್ ಸಮಿತಿಯ ವರದಿಯಲ್ಲಿ ದೇಶದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಅತ್ಯಂತ ಹಿಂದುಳಿದಂತಹ ಸಮುದಾಯ ಯಾವುದಾದರು ಆಗಿದ್ದರೆ ಅದು ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯ ಎಂದು ವರದಿಯಲ್ಲಿ ಉಲ್ಲೇಖವಾಗಿದೆ. ಇಂಥ ಸಂದರ್ಭದಲ್ಲಿ ಸರ್ಕಾರದ ಜವಾಬ್ದಾರಿಯ ಆಗಿರುತ್ತದೆ ಅಂತ ಸಂದಾಯಗಳನ್ನು ಗುರುತಿಸಿ ಅವರನ್ನು ಆರ್ಥಿಕವಾಗಿ,ಸಾಮಾಜಿಕವಾಗಿ,ಶೈಕ್ಷಣಿಕವಾಗಿ ಅಭಿವೃದ್ಧಿಪಡಿಸುವುದು ಸರ್ಕಾರದ ಕಾರ್ಯವಾಗಿರುತ್ತದೆ. ಕೇವಲ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯ ಎಂಬ ಏಕೈಕ ಕಾರಣಕ್ಕೆ ತಾಸರದಿಂದ ನೋಡುವುದು ಒಬ್ಬ ಜನ ಪ್ರತಿನಿಧಿಗೆ ಶೋಭೆ ತರುವುದಿಲ್ಲ. ಸರ್ಕಾರವು ಮೂಲ ಉದ್ದೇಶ ಹಿಂದುಳಿದ ಸಮುದಾಯಗಳನ್ನು ಅಭಿವೃದ್ಧಿ ಪಡಿಸುವುದಾಗಿರುತ್ತದೆ. ಇದು ಕೇವಲ ಮುಸ್ಲಿಂ ಸಮುದಾಯಕ್ಕೆ ಅಲ್ಲ ಇತರ ಹಿಂದುಳಿದ ಸಮುದಾಯಕ್ಕೂ ಈ ತರದ ಯೋಜನೆಗಳು ಈಗಾಗಲೇ ಇವೆ. ಆದರೆ ಅವುಗಳಿಗೆ ಬರದ ವಿರೋಧ ಕೇವಲ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯಕ್ಕೆ ಬರುತ್ತದೆ. ಇದು ನೋವಿನ ಸಂಗತಿ ಆಗಿದೆ. ಸಾಕಷ್ಟು ಯೋಜನೆಗಳು ಆಯಾ ಇಲಾಖೆಗಳಿಗೆ ಮುಖಾಂತರ ಆಯಾ ಸಮುದಾಯಗಳಿಗೆ ನೀಡುತ್ತಾ ಬಂದಿದ್ದರು ಅವುಗಳು ಅಷ್ಟು ಪ್ರಚಾರಕ್ಕೆ ಬರುವುದಿಲ್ಲ ಆದರೆ ಅಲ್ಪಸಂಖ್ಯಾತರಿಗೆ ಏನಾದರೂ ಸರಕಾರ ಯೋಜನೆಗಳನ್ನು ನೀಡಿದರೆ ಅದನ್ನು ತುಂಬಾ ಮಾರ್ಮಿಕವಾಗಿ ಮತ್ತು ಉತ್ಸಾಹದಿಂದ ಮಾಧ್ಯಮಗಳಲ್ಲಿ ಅವುಗಳನ್ನು ವಿರೋಧಿಸಲಾಗುತ್ತದೆ. ಎಷ್ಟು ಪ್ರಚಾರ ಪಡಿಸಲಾಗುತ್ತದೆ ಎಂದರೆ ಜನಸಾಮಾನ್ಯರಿಗೆ ಸರಕಾರ ಕೇವಲ ಅಲ್ಪಸಂಖ್ಯಾತರಿಗೆ ಯೋಜನೆಗಳನ್ನು, ಸವಲತ್ತುಗಳು ನೀಡುತ್ತಿದೆ ಎಂಬ ಭಾವನೆ ಮೂಡುವಂತೆ ಮಾಡಲಾಗುತ್ತದೆ. ಆದರೆ ಬೇರೆ ಸಮುದಾಯಗಳಿಗೆ ನೀಡಿದ ಯೋಜನೆಗಳನ್ನು ವಿರೋಧಿಸುವುದಿಲ್ಲ. ಇಂತಹ ತಾರತಮ್ಯ ಮಾಡುವುದು ನಿಲ್ಲಬೇಕು. ಪ್ರಥಮವಾಗಿ ಪ್ರತಿಯೊಬ್ಬ ಭಾರತೀಯರಿಗೂ ಸಿಗಬೇಕಾದ ಹಕ್ಕುಗಳು ಸಿಗಲೇಬೇಕು. ಎಲ್ಲ ಹಿಂದುಳಿದ ಬಡ ಸಮುದಾಯಗಳು ಅಭಿವೃದ್ಧಿ ಆದರೆ ನಮ್ಮ ಭಾರತವು ಒಂದು ಬಲಾಡ್ಯ ಶ್ರೀಮಂತರ ರಾಷ್ಟ್ರವಾಗುತ್ತದೆ. ಇಂಥ ಯೋಜನೆಗಳನ್ನು ಅಖಿಲ ಕರ್ನಾಟಕ ಮುಸ್ಲಿಂ ಮಹಾಸಭಾ ಸ್ವಾಗತಿಸುತ್ತದೆ. ಪ್ರತಿಯೊಂದು ಹಿಂದುಳಿದ ಸಮುದಾಯವು ಮುಂದೆ ಬರಬೇಕೆಂಬುದು ಅಖಿಲ ಕರ್ನಾಟಕ ಮುಸ್ಲಿಂ ಮಹಾಸಭಾ ಉದ್ದೇಶವಾಗಿರುತ್ತದೆ. ಜಾತ್ಯತೀತ ಪಕ್ಷ ಎಂದು ಹೇಳಿಕೊಂಡು ಇಂತಹ ಶಾಸಕರನ್ನು ಇಲ್ಲಿವರೆಗೆ ರಾಜನ ಪಡೆಯದಿದ್ದರೆ ಕಾಂಗ್ರೆಸ್ ಪಕ್ಷದ ಮನಸ್ಥಿತಿ ಬಗ್ಗೆ ಅನುಮಾನ ಮೂಡುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಹಿಂದ ನಾಯಕರು ಅವರನ್ನು ಸಮಸ್ತ ಅಹಿಂದ ಸಮುದಾಯದವರು ಅವರ ನಾಯಕತ್ವವನ್ನು ಒಪ್ಪಿಕೊಂಡಿದ್ದಾರೆ. ಅವರೊಬ್ಬ ಜಾತ್ಯಾತೀತ ನಾಯಕರು ಅವರನ್ನು ಮುಖ್ಯಮಂತ್ರಿಯ ಸ್ಥಾನದಿಂದ ಕೆಳಗಿಳಿಸಲು ಕೆಲ ಶಾಸಕರು ಅಲ್ಪಸಂಖ್ಯಾತ ಶಾಸಕರ ಮತ್ತು ಸಮುದಾಯದರ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡಿ ಕಾಂಗ್ರೆಸ್ ಪಕ್ಷದ ಹೆಸರನ್ನು ಮತ್ತು ಮುಖ್ಯಮಂತ್ರಿಗಳ ಹೆಸರನ್ನು ಕೆಡಿಸಲು ಈ ತರದ ಹೇಳಿಕೆಗಳನ್ನು ನೀಡುತ್ತಿದ್ದಾರೆ ಇದರ ಒಂದು ಭಾಗವೇ ಶ್ರೀರಂಗಪಟ್ಟಣದ ಶಾಸಕರು ಹೇಳಿಕೆ. ಇವರ ರಾಜೀನಾಮೆ ಪಡೆಯದಿದ್ದರೆ ಭವಿಷ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಾನಿಯಾಗುವ ಸಂಭವವಿದೆ. ತಕ್ಷಣ ಇವರು ರಾಜೀನಾಮೆ ಪಡೆಯಬೇಕು ಇಲ್ಲವಾದಲ್ಲಿ ಬಹಿರಂಗ ಕ್ಷಮೆ ಕೇಳಬೇಕು ಇವೆರಡು ನಡೆದಿದ್ದರೆ ರಾಹುಲ್ ಗಾಂಧಿ ಅವರಿಗೆ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮುಖ್ಯಮಂತ್ರಿಗಳಿಗೆ ಅಖಿಲ ಕರ್ನಾಟಕ ಮುಸ್ಲಿಂ ಮಹಾಸಭಾದಿಂದ ಶಾಸಕರ ವಿರುದ್ಧ ಪತ್ರವನ್ನು ಬರೆಯಲಾಗುವುದು. ಇದರ ಬಗ್ಗೆ ಕಾಂಗ್ರೆಸ್ ಪಕ್ಷ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಕಾಂಗ್ರೆಸ್ ಪಕ್ಷಕ್ಕೆ ಆಗ್ರಹಿಸಿದರು.ಶ್ರೀರಂಗಪಟ್ಟಣ ಶಾಸಕರ ಹೇಳಿಕೆ ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ಹೇಳಿರುವ ಹೇಳಿಕೆಯಾಗಿದೆ. ಅವರ ಈ ಹೇಳಿಕೆ ಅವರ ಘನತೆಗೆ ಶೋಭೆ ತರುವುದಿಲ್ಲ ಎಂದು ಅಖಿಲ ಕರ್ನಾಟಕ ಮುಸ್ಲಿಂ ಮಹಾಸಭಾ ರಾಜ್ಯಾಧ್ಯಕ್ಷರು ಹೇಳಿದರು.
ಈ ಸಂದರ್ಭದಲ್ಲಿ ಧಾರವಾಡ ಮತ್ತು ಗದಗ ಜಿಲ್ಲಾ ಉಸ್ತುವಾರಿಯಗಳಾದ ಜಾಫರ್ ಡಾಲಾಯತ್, ಮುನ್ನಾ ಕಲ್ಮನಿ, ಎಸ್ ಎಸ್ ಖಾದ್ರಿ, ಮುಜಮಿಲ್ ಬಳ್ಳಾರಿ, ಇಲಿಯಾಸ್ ಶಿರಹಟ್ಟಿ, ಇಸಾಕ್ ಇರಕಲ್, ಹನೀಫ್ ಇರಕಲ್, ಪದಾಧಿಕಾರಿಗಳು ಉಪಸ್ಥಿತರಿದ್ದರು.
