ಇರಾನ್ ಬೆಂಬಲಕ್ಕೆ ನಿಂತ ರಷ್ಯಾ: ಸೇನಾ ಹಸ್ತಕ್ಷೇಪ ಮಾಡದಂತೆ ಅಮೆರಿಕಾಕ್ಕೆ ಎಚ್ಚರಿಕೆ

Share
0Shares

ಮಾಸ್ಕೋ: ಇರಾನ್-ಇಸ್ರೇಲ್ ನಡುವಿನ ಸಂಘರ್ಷ ಶುಕ್ರವಾರ 8ನೇ ದಿನಕ್ಕೆ ಕಾಲಿಟ್ಟಿದ್ದು, ಈ ನಡುವಲ್ಲೇ ಇರಾನ್’ಗೆ ರಷ್ಯಾ ಬೆಂಬಲ ವ್ಯಕ್ತಪಡಿಸಿದೆ. ಅಲ್ಲದೆ, ಮಿಲಿಟರಿ ಹಸ್ತಕ್ಷೇಪದ ವಿರುದ್ಧ ಅಮೆರಿಕಾಕ್ಕೆ ಎಚ್ಚರಿಕೆಯನ್ನೂ ನೀಡಿದೆ.

ಇಸ್ರೇಲ್-ಇರಾನ್ ಸಮರಕ್ಕೆ ಅಮೆರಿಕಾ ಪ್ರವೇಶ ಖಚಿತವಾಗಿರುವ ಹಿನ್ನೆಲೆಯಲ್ಲಿ ರಷ್ಯಾ ಕೂಡ ಇದೀಗ ಎಂಟ್ರಿ ಕೊಡ್ಡಿದ್ದು, ಈ ಬೆಳವಣಿಗೆ ಮತ್ತೊಂದು ಸುತ್ತಿನ ಶೀತಲ ಸಮರಕ್ಕೆ ನಾಂದಿ ಹಾಡುವ ಆತಂತಕಕ್ಕೆ ಕಾರಣವಾಗಿದೆ.

ರಷ್ಯಾ ವಿದೇಶಾಂಗ ಇಲಾಖೆ ವಕ್ತಾರೆ ಮಾರಿಯಾ ಜಖರೋವಾ ಅವರ ಅವರ ಮಾತನಾಡಿ, ಇಸ್ರೇಲ್ ಪರವಾಗಿ ನೇರವಾಗಿ ಧುಮಕದಂತೆ ಅಮೆರಿಕಾಕಕ್ಕೆ ಎಚ್ಚರಿಕೆ ನೀಡಿದ್ದಾರೆ.

ಈ ಪರಿಸ್ಥಿತಿಯಲ್ಲಿ ಸೇನಾ ಹಸ್ತಕ್ಷೇಪ ಮಾಡದಂತೆ ವಾಷಿಂಗ್ಟನ್’ಗೆ ಎಚ್ಚರಿಸುತ್ತಿದ್ದೇವೆ. ಒಂದೊಮ್ಮೆ ಈ ಅಪಾಯಕಾರಿ ಹೆಜ್ಜೆ ಇಟ್ಟಿದ್ದೇ ಆದರೆ, ಅನಿರೀಕ್ಷಿತ ಕೆಟ್ಟ ಪರಿಣಾಮ ಎದುರಿಸುವುದು ಖಂಡಿತ ಎಂದು ಹೇಳಿದ್ದಾರೆ.

Share
0Shares

Leave a Reply

Your email address will not be published. Required fields are marked *

WP2Social Auto Publish Powered By : XYZScripts.com
error: Content is protected !!
× How can I help you?
ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 94488 74282