ಬೆಂಗಳೂರು: ತನ್ನ ಬಾಯ್ ಫ್ರೆಂಡ್ ಪ್ರೀತಿ ನಿರಾಕರಿಸಿದ ಎಂಬ ಕಾರಣಕ್ಕೆ ಮಹಿಳಾ ಟೆಕ್ಕಿಯೊಬ್ಬರು ಬೆಂಗಳೂರು ಶಾಲೆಗಳಿಗೆ ಬಾಂಬ್ ಬೆದರಿಕೆ ಸಂದೇಶ ಕಳುಹಿಸಿದ ವಿಲಕ್ಷಣ ಘಟನೆ ವರದಿಯಾಗಿದೆ. ರಾಜಧಾನಿ ಬೆಂಗಳೂರಿನ ಹಲವು ಶಾಲೆಗಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ಕಳುಹಿಸಿದ್ದ ಪ್ರಕರಣದಲ್ಲಿ…
Author: Fast News 24
ಬಿಹಾರ ಚುನಾವಣೆ: ಮೊದಲ ಹಂತದಲ್ಲಿ ಶೇ 64.46 ಮತದಾನ
ಪಟ್ನಾ: ಗುರುವಾರ ಬಿಹಾರದಲ್ಲಿ ಮೊದಲ ಹಂತದ ಮತದಾನ ಮುಕ್ತಾಯವಾಗಿದೆ. ಶೇ 64.46ರಷ್ಟು ಮತದಾನ ದಾಖಲಾಗಿದೆ ಎಂದು ಭಾರತೀಯ ಚುನಾವಣಾ ಆಯೋಗ ತಿಳಿಸಿದೆ. ಸಿಎಂ ನಿತೀಶ್ ಕುಮಾರ್, ಆರ್ಜೆಡಿ ನಾಯಕ ಮತ್ತು ಇಂಡಿಯಾ ಒಕ್ಕೂಟದ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ ಮತ್ತು ಕೇಂದ್ರ…
ರಾಜ್ಯ ಕಬ್ಬು ಬೆಳೆಗಾರರ ಹೋರಾಟ: ತುರ್ತು ಭೇಟಿಗೆ ಅವಕಾಶ ನೀಡುವಂತೆ ಪ್ರಧಾನಿಗೆ ಸಿಎಂ ಪತ್ರ
ಬೆಂಗಳೂರು: ರಾಜ್ಯದ ಕಬ್ಬು ಬೆಳೆಗಾರರ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಚರ್ಚಿಸಲು ತುರ್ತು ಭೇಟಿಗೆ ಅವಕಾಶ ನೀಡುವಂತೆ ಸಿಎಂ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. ರಾಜ್ಯದಲ್ಲಿ ಕಬ್ಬು ಬೆಳೆಗಾರರು ತೀವ್ರ ಪ್ರತಿಭಟನೆ ನಡೆಸುತ್ತಿದ್ದಾರೆ. ಕಬ್ಬು ಬೆಳೆಗಾರರು ಮತ್ತು ಸಕ್ಕರೆ…
ಪುತ್ತೂರು | ಸುಳ್ಳು ದಾಖಲೆ ಸೃಷ್ಟಿಸಿ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದ ಆರೋಪ: ಪ್ರಕರಣ ದಾಖಲು
ಪುತ್ತೂರು: ಜಾನುವಾರುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಆರೋಪಿಗೆ ಗುಂಡೇಟು ಘಟನೆಗೆ ಸಂಬಂಧಿಸಿದಂತೆ ಸುಳ್ಳು ದಾಖಲೆ ಸೃಷ್ಟಿಸಿ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದ ಆರೋಪದ ಮೇರೆಗೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪುತ್ತೂರು ಗ್ರಾಮಾಂತರ ಪೊಲೀಸ್…
ಕುಡಿದು ಬರುತ್ತಿದ್ದ ಡ್ರೈವರ್ಗಳಿಗೆ ಲಂಚ ಪಡೆದು ಡ್ಯೂಟಿ: BMTC ಡಿಪೋ ಮ್ಯಾನೇಜರ್ ಸೇರಿ 9 ಮಂದಿ ಅಮಾನತು
ಬೆಂಗಳೂರು: ಕುಡಿದು ಬರುತ್ತಿದ್ದ ಎಲೆಕ್ಟ್ರಿಕ್ ಬಸ್ ಡ್ರೈವರ್ಗಳ ಬಳಿ ಲಂಚ ಪಡೆದು ಡ್ಯೂಟಿ ನೀಡಿದ್ದಕ್ಕೆ ಬಿಎಂಟಿಸಿ ಅಧಿಕಾರಿ ಸೇರಿ 9 ಮಂದಿಯನ್ನು ಅಮಾನತು ಮಾಡಲಾಗಿದೆ. ಘಟಕ ವ್ಯವಸ್ಥಾಪಕ ಎಂ.ಜಿ.ಕೃಷ್ಣ, ಸಂಚಾರ ನಿರೀಕ್ಷಕ ಶ್ರೀನಿವಾಸ ಡಿ, ಅರುಣ್ ಕುಮಾರ್.ಇ.ಎಸ್. (ಸಹಾಯಕ ಲೆಕ್ಕಿಗ), ಕಿರಿಯ…
ಜನಗಣಮನ ಬ್ರಿಟಿಷ್ ಅಧಿಕಾರಿ ಸ್ವಾಗತಕ್ಕೆ ರಚಿಸಿದ್ದ ಗೀತೆ: ಸಂಸದ ಕಾಗೇರಿ ವಿವಾದಾತ್ಮಕ ಹೇಳಿಕೆ
ಕಾರವಾರ: ಜನಗಣಮನ ಬ್ರಿಟಿಷ್ ಅಧಿಕಾರಿ ಸ್ವಾಗತಕ್ಕೆ ರಚಿಸಿದ್ದ ಗೀತೆಯಾಗಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಹೇಳಿದ್ದು, ಈ ಹೇಳಿಕೆ ವಿವಾದ ಸೃಷ್ಟಿಸಿದೆ. ಹೊನ್ನಾವರದಲ್ಲಿ ಬುಧವಾರ ಸರ್ದಾರ್ ವಲ್ಲಭಬಾಯಿ ಪಟೇಲ್ 150ನೇ ಜನ್ಮ ದಿನಾಚರಣೆ ಅಂಗವಾಗಿ ನಡೆದ ಏಕತೆಗಾಗಿ ನಡಿಗೆ…
ಸಿಎಂ ಸ್ಟಾಲಿನ್ ಅಸಮರ್ಥ, ಸಂಕುಚಿತ ಮನಸ್ಸಿನವರು: TVK ನಾಯಕ ವಿಜಯ್ ಆರೋಪ
ಮಾಮಲ್ಲಪುರಂ: ಟಿವಿಕೆ ನಾಯಕ ಹಾಗೂ ನಟ ವಿಜಯ್ ತಮಿಳುನಾಡು ಸಿಎಂ ಎಂ ಕೆ ಸ್ಟಾಲಿನ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸ್ಟಾಲಿನ್ ಅಸಮರ್ಥ, ಸಂಕುಚಿತ ಮನಸ್ಸಿನವರು ಎಂದು ಟೀಕಿಸಿದ್ದಾರೆ. ಚೆಂಗಲ್ಪಟ್ಟು ಜಿಲ್ಲೆಯ ಮಾಮಲ್ಲಪುರಂ ಬಳಿಯ ಖಾಸಗಿ ಸ್ಟಾರ್ ಹೋಟೆಲ್ನಲ್ಲಿ ಇಂದು ಟಿವಿಕೆ ವಿಶೇಷ…
ಮಂಗಳೂರು | ಪೂಜೆ ಹೆಸರಿನಲ್ಲಿ ಸೈಬರ್ ವಂಚನೆ: ₹24.78 ಲಕ್ಷ ಕಳೆದುಕೊಂಡ ವ್ಯಕ್ತಿ; ಆರೋಪಿ ಸೆರೆ
ಮಂಗಳೂರು: ವೈಯಕ್ತಿಕ ಸಮಸ್ಯೆಗಳನ್ನು ತತ್ಕ್ಷಣದಲ್ಲಿ ಪರಿಹರಿಸುವುದಾಗಿ ಇನ್ಸ್ಟಾಗ್ರಾಂ ಖಾತೆಯಲ್ಲಿ ಜಾಹೀರಾತು ನೀಡಿ, ಪೂಜೆ ಮಾಡುವ ನೆಪದಲ್ಲಿ ವ್ಯಕ್ತಿಯೊಬ್ಬರಿಗೆ ಸುಮಾರು ₹24,78,274 ಸೈಬರ್ ವಂಚನೆ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲಾ ಸೈಬರ್ ಅಪರಾಧ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಇನ್ಸ್ಟಾಗ್ರಾಂನಲ್ಲಿ…
SSLC, ದ್ವಿತೀಯ ಪಿಯುಸಿ ಪರೀಕ್ಷೆ 1 & 2 ಅಂತಿಮ ವೇಳಾಪಟ್ಟಿ ಪ್ರಕಟ
ಬೆಂಗಳೂರು: 2025-26ನೇ ಸಾಲಿನ SSLC ಮತ್ತು ದ್ವೀತಿಯ ಪಿಯುಸಿ ಪರೀಕ್ಷೆ 1 ಮತ್ತು 2 ಅಂತಿಮ ವೇಳಾಪಟ್ಟಿಯನ್ನ ಶಿಕ್ಷಣ ಇಲಾಖೆ ಪ್ರಕಟ ಮಾಡಿದೆ.ಫೆಬ್ರವರಿಯಿಂದಲೇ ಈ ವರ್ಷದ ಪರೀಕ್ಷೆಗಳು ಪ್ರಾರಂಭವಾಗಲಿದ್ದು, ಮೇ ಗೆ ಎರಡು ಪರೀಕ್ಷೆಗಳು ಮುಗಿಯಲಿವೆ. SSLC ಪರೀಕ್ಷೆ 1 ಮಾರ್ಚ್…
ಜಾರ್ಖಂಡ್: ಆಸ್ಪತ್ರೆ ಆಪರೇಷನ್ ಥಿಯೇಟರ್ ಟೇಬಲ್ ನಿಂದ ಬಿದ್ದು ಗರ್ಭಿಣಿ ಸಾವು!
ರಾಂಚಿ: ಜಾರ್ಖಂಡ್ ನ ಹಜಾರಿಬಾಗ್ ಶೇಖ್ ಭಿಖಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯಕೀಯ ನಿರ್ಲಕ್ಷ್ಯದ ಭಯಾನಕ ಘಟನೆ ನಡೆದಿದ್ದು, ಆಪರೇಷನ್ ಥಿಯೇಟರ್ನಲ್ಲಿ(OT) ಟೇಬಲ್ ನಿಂದ ಬಿದ್ದು ಗರ್ಭಿಣಿ ಮಹಿಳೆ ಸಾವನ್ನಪ್ಪಿದ್ದಾರೆ. ಮಹಿಳೆ ಕುಟುಂಬವು ಸಾವಿಗೆ ಆಸ್ಪತ್ರೆ ಆಡಳಿತದ ವಿರುದ್ಧ ಬೊಟ್ಟು…
