ಫೆ.4ರ ವರೆಗೆ ವಿಧಾನಮಂಡಲ ಜಂಟಿ ಅಧಿವೇಶನ ವಿಸ್ತರಣೆ: ಯು.ಟಿ.ಖಾದರ್‌

ಬೆಂಗಳೂರು: ವಿಧಾನಮಂಡಲದ ಜಂಟಿ ಅಧಿವೇಶನ ಫೆಬ್ರುವರಿ 4ರವರೆಗೆ ನಡೆಯಲಿದೆ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್‌ ತಿಳಿಸಿದರು. ಈ ಹಿಂದೆ ಇದೇ 31ರವರೆಗೆ ನಡೆಸಲು ತೀರ್ಮಾನಿಸಲಾಗಿತ್ತು. ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯ ಮತ್ತು ವಿಬಿ ಜಿ ರಾಮ್‌ ಜಿ ಕುರಿತ ಚರ್ಚೆ ನಡೆಯಬೇಕಿರುವುದರಿಂದ…

ಬೆಂಗಳೂರು : ಬ್ಯಾರಿಸ್ ಸೆಂಟ್ರಲ್ ಕಮಿಟಿಯಿಂದ ಫೆ.1ರಂದು ‘ಬ್ಯಾರಿ ಕೂಟ’

15 ಲಕ್ಷ ಮೌಲ್ಯದ ವಿದ್ಯಾರ್ಥಿ ವೇತನ ವಿತರಣೆ, ಆ್ಯಂಬ್ಯುಲೆನ್ಸ್ ಲೋಕಾರ್ಪಣೆ ಬೆಂಗಳೂರು : “ಕರಾವಳಿ ಭಾಗದ ಬ್ಯಾರಿ ಸಮುದಾಯವರು ಉದ್ಯೋಗ, ವ್ಯಾಪಾರ, ಶಿಕ್ಷಣ ಸೇರಿದಂತೆ ಹಲವು ಕಾರಣಕ್ಕಾಗಿ ಬೆಂಗಳೂರಿನಲ್ಲಿ ಬಂದು ನೆಲೆಸಿದ್ದಾರೆ. ಬ್ಯಾರಿ ಸಮುದಾಯದ ಎಲ್ಲರನ್ನೂ ಒಂದೇ ವೇದಿಕೆಯಡಿ ಒಟ್ಟುಗೂಡಿಸುವ ಉದ್ದೇಶದಿಂದ…

ಗ್ರಾಮ ಪಂಚಾಯತ್ ಸಮರಕ್ಕೆ ಮುಹೂರ್ತ ಫಿಕ್ಸ್? ಜಿಲ್ಲಾಧಿಕಾರಿಗಳಿಗೆ ಸರ್ಕಾರದಿಂದ ಮಹತ್ವದ ಸೂಚನೆ!

ಬೆಂಗಳೂರು: 2026-31ನೇ ಸಾಲಿನ ಗ್ರಾಮ ಪಂಚಾಯ್ತಿಗಳ ಚುನಾವಣೆಗೆ ಪೂರ್ವ ಸಿದ್ಧತೆ ಮಾಡಿಕೊಳ್ಳುವಂತೆ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಕಾರ್ಯದರ್ಶಿ ಸೂಚನೆ ನೀಡಿದ್ದಾರೆ. 2020-25ನೇ ಅವಧಿಯ ಗ್ರಾಮ ಪಂಚಾಯಿತಿಗಳ ಅವಧಿಯು 2026ರ ಜನವರಿ ಮಾಹೆಯಿಂದ ಪೂರ್ಣಗೊಳ್ಳಲಿದೆ. ಸದರಿ…

ಚಿನ್ನದ ಬೆಲೆ ಗ್ರಾಮ್​ಗೆ 755 ರೂ. ಇಳಿಕೆ; ಇಲ್ಲಿದೆ ದರಪಟ್ಟಿ

ಬೆಂಗಳೂರು: ನಿನ್ನೆ ಸಿಕ್ಕಾಪಟ್ಟೆ ಏರಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಇಂದು ಶುಕ್ರವಾರ ಇಳಿಕೆ ಕಂಡಿವೆ. ಆಭರಣ ಚಿನ್ನದ ಬೆಲೆ ಮತ್ತೆ 16,000 ರೂಗಿಂತ ಕಡಿಮೆಗೆ ಬಂದಿದೆ. ವಿದೇಶ ಗಳಲ್ಲೂ ಹೆಚ್ಚಿನ ಕಡೆ ಬೆಲೆ ಇಳಿಕೆ ಆಗಿದೆ. ಬೆಳ್ಳಿ ಬೆಲೆಯೂ 10-15…

BMTC ಬಸ್’ಗಳಲ್ಲಿ ಗುಟ್ಕಾ ಜಾಹೀರಾತು: ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದೇನು..?

ಬೆಂಗಳೂರು: ನಗರದ ಬಿಎಂಟಿಸಿ ಬಸ್ ಗಳ ಮೇಲೆ ಗುಟ್ಕಾ ಜಾಹೀರಾತುಗಳು ರಾರಾಜಿಸುತ್ತಿದ್ದು, ಇದರ ವಿರುದ್ಧ ಸಾರ್ವಜನಿಕರು ಹಾಗೂ ಕನ್ನಡಪರ ಸಂಘಟನೆಗಳು ಸಮರ ಸಾರಿದ್ದಾರೆ. ಬಸ್ ಗಳ ಮೇಲೆ ಹಾಕಲಾಗಿರುವ ಜಾಹೀರಾತು ಚಿತ್ರಗಳನ್ನು ಕಿತ್ತೆಸೆಯುತ್ತಿರುವ ಕನ್ನಡಪರ ಹೋರಾಟಗಾರರು, ಇಂತಹ ಅನಾರೋಗ್ಯಕರ ವಸ್ತುಗಳನ್ನು ಪ್ರೋತ್ಸಾಹಿಸುವುದು…

ಅಪ್ಪಾ, ನಾನು ಅಜಿತ್ ಪವಾರ್ ಜೊತೆ ಬಾರಾಮತಿಗೆ ಹೋಗುತ್ತಿದ್ದೇನೆ: ತಂದೆಗೆ ಕೊನೆಯ ಕರೆ ಮಾಡಿದ್ದ ಪಿಂಕಿ ಮಾಲಿ!

ಮುಂಬೈ: ಅಪ್ಪಾ, ನಾನು ನಾಳೆ ಉಪ ಮುಖ್ಯಮಂತ್ರಿ ಅಜಿತ್‌ ಪವಾರ್‌ ಅವರೊಂದಿಗೆ ಬಾರಾಮತಿಗೆ ಹೋಗುತ್ತಿದ್ದೇನೆ. ಬಾರಾಮತಿಯಲ್ಲಿ ಅವರು ವಿಮಾನದಿಂದ ಇಳಿದ ನಂತರ, ನಾನು ನಾಂದೇಡ್‌ಗೆ ಹೋಗುತ್ತೇನೆ, ಹೋಟೆಲ್‌ ತಲುಪಿದ ತಕ್ಷಣವೇ ನಿಮಗೆ ಫೋನ್‌ ಮಾಡುತ್ತೇನೆ. ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು…

ಚಿನ್ನ, ಬೆಳ್ಳಿ ಬೆಲೆ ಗಗನಕ್ಕೆ: ಇಲ್ಲಿದೆ ದರಪಟ್ಟಿ

ಬೆಂಗಳೂರು: ಚಿನ್ನ -ಬೆಳ್ಳಿ ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲವಾಗುತ್ತಿದೆ. ನೋಡನೋಡುತ್ತಿದ್ದಂತೆಯೇ, ಚಿನ್ನದ ಬೆಲೆ ಗ್ರಾಂ ಗೆ 18 ಸಾವಿರಕ್ಕೆ ತಲುಪುತ್ತಿದೆ. ಬೆಳ್ಳಿ ಬೆಲೆ ಕೆಜಿ ಗೆ 4 ಲಕ್ಷದ 10 ಸಾವಿರಕ್ಕೆ ಏರಿಕೆ. ನಿನ್ನೆ 5 ಸಾವಿರ ಹೆಚ್ಚಳವಾಗಿದ್ದ 10 ಗ್ರಾಂ ಚಿನ್ನದ…

ಕೊಲಂಬಿಯಾದ ಗಡಿಯಲ್ಲಿ ವಿಮಾನ ಪತನ; ಸಂಸದ ಸೇರಿ 15 ಮಂದಿ ದುರ್ಮರಣ

ಬೊಗೋಟಾ: ಸಂಸದ ಸೇರಿದಂತೆ 15 ಜನರನ್ನು ಹೊತ್ತೊಯ್ಯುತ್ತಿದ್ದ ವಿಮಾನವು ಬುಧವಾರ ಕೊಲಂಬಿಯಾ-ವೆನೆಜುವೆಲಾದ ಗಡಿಯ ಬಳಿ ಪತನಗೊಂಡು ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಸರ್ಕಾರಿ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಈ ವಿಮಾನವು ಗಡಿ ನಗರವಾದ ಕುಕುಟಾದಿಂದ ಹೊರಟು, ಮಧ್ಯಾಹ್ನ ಸುಮಾರು…

ಮಂಗಳೂರು: ಮೀನುಗಾರರೇ ನಿರ್ಮಿಸಿದ ಮೊದಲ ‘ಬೋಟ್‌ ಆ್ಯಂಬುಲೆನ್ಸ್‌’ಗೆ ಚಾಲನೆ

ಮಂಗಳೂರು: ಉಳ್ಳಾಲ ವಲಯ ನಾಡದೋಣಿ ಮತ್ತು ಗಿಲ್‌ನೆಟ್‌ ಮೀನುಗಾರರ ಸಂಘದ ವತಿಯಿಂದ ನಿರ್ಮಿಸಲಾದ ದಕ್ಷಿಣ ಕನ್ನಡ ಜಿಲ್ಲೆಯ ಪ್ರಥಮ “ಬೋಟ್‌ ಆ್ಯಂಬುಲೆನ್ಸ್‌’ಗೆ ಜಪ್ಪಿನಮೊಗೇರು ನದಿ ತಟದಲ್ಲಿ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್‌ ಚಾಲನೆ ನೀಡಿದರು. ಮೀನುಗಾರರ ಜೀವ ರಕ್ಷಣೆಗಾಗಿಯೇ ಬೋಟ್‌ ಆ್ಯಂಬುಲೆನ್ಸ್‌ ಸೇವೆ…

ವಿಮಾನ ಅಪಘಾತ: ಟೇಕ್ ಆಫ್ ವೇಳೆ ಜೆಟ್ ಅಪಘಾತ; 7 ಮಂದಿ ಸಾವು, ಬದುಕುಳಿದ ಓರ್ವ ಸಿಬ್ಬಂದಿ!

ಮೈನೆ: ಅಮೆರಿಕದ ಮೈನೆ ರಾಜ್ಯದಲ್ಲಿ ಪ್ರಮುಖ ವಿಮಾನ ಅಪಘಾತ ಸಂಭವಿಸಿದೆ. ಬ್ಯಾಂಗೋರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟೇಕ್ ಆಫ್ ವೇಳೆ ಖಾಸಗಿ ಜೆಟ್ ಅಪಘಾತಕ್ಕೀಡಾಗಿ ಏಳು ಜನರು ಸಾವನ್ನಪ್ಪಿದ್ದು, ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಫೆಡರಲ್ ಏವಿಯೇಷನ್ ​​ಅಡ್ಮಿನಿಸ್ಟ್ರೇಷನ್ (ಎಫ್‌ಎಎ) ಪ್ರಕಾರ, ಅಮೆರಿಕದ…

WP2Social Auto Publish Powered By : XYZScripts.com
error: Content is protected !!
× How can I help you?
ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 94488 74282